
ಬಿಗ್‌ಬಾಸ್ ಫೈನಲಿಸ್ಟ್‌ಗಳು
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಜ.18 ಈ ಬಾರಿಯ ಬಿಗ್‌ಬಾಸ್ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದ್ದು, ವೀಕ್ಷಕರ ಚಿತ್ತ ವಿನ್ನರ್‌ನತ್ತ ನೆಟ್ಟಿದೆ.
ಇದರ ಮಧ್ಯೆ ಶನಿವಾರದ (ಜ.17) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ವಿನ್ನರ್ ಪಡೆದ ದಾಖಲೆಯ ಮತವನ್ನು ಬಹಿರಂಗ ಪಡಿಸಿದ್ದರು. ವೋಟಿಂಗ್ ಸಂಖ್ಯೆಯನ್ನು ನೋಡಿದ ವೀಕ್ಷಕರು, ಸ್ಪರ್ಧಿಗಳು ಅಚ್ಚರಿಗೊಂಡಿದ್ದರು. ಇನ್ನು, ಈ ಬಾರಿಯ ಬಿಗ್‌ಬಾಸ್ ವಿಜೇತ ಕಳೆದ ಸೀಸನ್ ಟ್ರೋಫಿ ಗೆದ್ದುಕೊಂಡಿದ್ದ ಹನುಮಂತನವರ ದಾಖಲೆಯನ್ನು ಮುರಿದಿದ್ದಾರೆ.
ಕಳೆದ ಸೀಸನ್ 11ರ ವಿಜೇತ ಹನುಮಂತ ಲಮಾಣಿ ಅವರು ಬರೋಬ್ಬರಿ 5 ಕೋಟಿ ಮತವನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿಯ ವಿನ್ನರ್ ದಾಖಲೆಯ ವೋಟಿಂಗ್ ಸಂಖ್ಯೆಯನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಟಾಪ್ 6 ಫೈನಲಿಸ್ಟ್‌ಗಳು ಉಳಿದುಕೊಂಡಿದ್ದಾರೆ. ಧನುಷ್ ಗೌಡ, ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ವಿನ್ನಿಂಗ್ ರೇಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.