
ಕಿಚ್ಚ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಬಿಗ್‌ಬಾಸ್ ಸೀಸನ್ 12 ವಿಜೇತರಾಗುವ ಸ್ಪರ್ಧಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ. ವಿನ್ನರ್ ಪಡೆದ ಮತಗಳ ಸಂಖ್ಯೆ ನೋಡಿ ಫೈನಲಿಸ್ಟ್‌ಗಳು ಅಚ್ಚರಿಗೊಂಡಿದ್ದಾರೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ವಾರದ ಪಂಚಾಯಿತಿ ನಡೆಸಲು ಸುದೀಪ್ ಅವರು ಬಿಗ್‌ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ವಿನ್ನರ್ ಪಡೆದ ದಾಖಲೆಯ ವೋಟಿಂಗ್ ಅನ್ನು ರಿವೀಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಅತಿ ಕಡಿಮೆ ಮತಗಳ ಅಂತರವಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಕನ್ನಡದ ಬಿಗ್‌ಬಾಸ್ ಇತಿಹಾಸ ಸೃಷ್ಟಿಸಿದೆ. ಕಳೆದ ವರ್ಷ ವಿನ್ನರ್ಗೆ ಐದು ಕೋಟಿ ವೋಟ್ ಬಂದಿತ್ತು. ಈ ಬಾರಿ ವಿನ್ನರ್ ಪಡೆದ ವೋಟ್ 37 ಕೋಟಿಗೂ ಅಧಿಕ ಎಂದು ಸುದೀಪ್ ಹೇಳಿದ್ದಾರೆ. ಇದೀಗ ದಾಖಲೆಯ ವೋಟಿಂಗ್ ಪಡೆದ ಆ ಒಬ್ಬ ಸ್ಪರ್ಧಿ ಯಾರೆಂದು ಭಾನುವಾರದ ಸಂಚಿಕೆಯಲ್ಲಿ ತಿಳಿದು ಬರಲಿದೆ.
ಸದ್ಯ ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಜ.18 ಭಾನುವಾರ ಈ ಬಾರಿಯ ಬಿಗ್‌ಬಾಸ್ ಟ್ರೋಪಿ ಯಾರ ಕೈಗೆ ಸೇರಲಿದೆ ಎಂದು ಗೊತ್ತಾಗಲಿದೆ. ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಟಾಪ್ 6 ಫೈನಲಿಸ್ಟ್‌ಗಳು ಉಳಿದುಕೊಂಡಿದ್ದಾರೆ. ಧನುಷ್ ಗೌಡ, ಕಾವ್ಯ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ರಕ್ಷಿತಾ ಫೈನಲ್ ರೇಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.