ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕನ್ನಡ ಬಿಗ್‌ಬಾಸ್ 12ನೇ ಆವೃತ್ತಿ ಆರಂಭಗೊಂಡಿದೆ. ಒಟ್ಟು 19 ಸ್ಪರ್ಧಿಗಳು ಬಿಗ್‌ಬಾಸ್ ಮನೆ ಸೇರಿದ್ದಾರೆ. ಬಿಗ್‌ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳಿಗೆ ಮೊದಲ ದಿನದಲ್ಲೇ ಟಾಸ್ಕ್ ನೀಡಲಾಗಿದೆ.
ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್
ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್ ಮನೆ ಪಡೆಯುವ ದಿನಸಿ ಸಾಮಾಗ್ರಿಗಳ ನಿರ್ಧಾರ ಒಂಟಿಗಳದ್ದೇ ಆಗಿರುತ್ತದೆ ಎಂದಿದ್ದಾರೆ. ಚಟುವಟಿಕೆ ಕೋಣೆಯಲ್ಲಿ ಇರಿಸಲಾದ ತರಕಾರಿಗಳನ್ನು ಸ್ಪರ್ಧಿಗಳು ಆಯ್ಕೆ ಮಾಡಿ ಮತ್ತೊಂದು ಟೇಬಲ್ ಮೇಲೆ ಇಡಬೇಕಾಗಿತ್ತು.
ಆದರೆ, ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಮಾತು ಅರ್ಥವಾಗದೇ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆಗೆ ಓಡಾಡಿದ್ದಾರೆ. ಬಳಿಕ ಮತ್ತೆ ಬಿಗ್‌ಬಾಸ್ ಹೇಳುತ್ತಿದ್ದಂತೆ ಗುರುತಿನ ಮೇಲೆ ನಿಂತುಕೊಂಡಿದ್ದಾರೆ. ಆದರೆ, ಮಲ್ಲಮ್ಮ ಯಾವ ದಿನಸಿ ಸಾಮಾಗ್ರಿಗಳನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ ಮಲ್ಲಮ್ಮನ ಯಡವಟ್ಟು ಮನೆಯವರನ್ನು ಉಪವಾಸ ಇರುವಂತೆ ಮಾಡುತ್ತಾ ಎಂಬುವುದು ಇಂದು ರಾತ್ರಿ 9.30ಕ್ಕೆ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.