ADVERTISEMENT

ಬಿಗ್‌ಬಾಸ್‌ ಖ್ಯಾತಿಯ ಚೈತ್ರ ಕೋಟೂರು ಸರಳ ವಿವಾಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 15:08 IST
Last Updated 28 ಮಾರ್ಚ್ 2021, 15:08 IST
ಚೈತ್ರಾ ಕೋಟೂರು
ಚೈತ್ರಾ ಕೋಟೂರು   

ಬೆಂಗಳೂರು: ಬಿಗ್‌ಬಾಸ್‌ ರಿಯಾಲಿಟಿ ಶೋ ಮುಖಾಂತರ ಜನಪ್ರಿಯಗೊಂಡಿದ್ದ ನಟಿ, ನಿರ್ದೇಶಕಿ, ಬರಹಗಾರ್ತಿ ಚೈತ್ರಾ ಕೋಟೂರು ಅವರು ಭಾನುವಾರ ಬೆಂಗಳೂರಿನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸದ್ದು ಮಾಡಿದ್ದ ಚೈತ್ರಾ, ಇದೀಗ ಸದ್ದಿಲ್ಲದೆ ಬ್ಯಾಟರಾಯನಪುರದ ಗಣಪತಿ ದೇವಸ್ಥಾನವೊಂದರಲ್ಲಿ ಉದ್ಯಮಿಯಾಗಿರುವ ನಾಗರ್ಜುನ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಬಿಗ್‌ಬಾಸ್‌ನಲ್ಲಿ ಎಲಿಮಿನೇಟ್‌ ಆಗಿದ್ದ ಚೈತ್ರಾ, ವೈಲ್ಡ್‌ಕಾರ್ಡ್‌ ಮೂಲಕ ಮತ್ತೆ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದರು.

ಸೂಜಿದಾರ ಚಿತ್ರದ ಮುಖಾಂತರ ನಟಿಯಾಗಿ ಚೈತ್ರಾ ಚಂದನವನ ಪ್ರವೇಶಿಸಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ, ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಹುಡುಗರು ತುಂಬಾ ಒಳ್ಳೆಯವರು’ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.