
ಯೋಗರಾಜ ಭಟ್, ರಕ್ಷಿತಾ, ಜಗ್ಗೇಶ್
ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಶೋ ಕಾರ್ಯಕ್ರಮವನ್ನು ಮತ್ತೆ ತೆರೆಗೆ ತಂದಿದೆ. ಅಕ್ಟೋಬರ್ 25ರ ರಾತ್ರಿ 9 ಗಂಟೆಗೆ ರಾಜ್ಯದ ಜನರನ್ನು ನಗಿಸುವುದಕ್ಕೆ ಕಿಲಾಡಿಗಳು ಸಜ್ಜಾಗಿದ್ದಾರೆ. ಆದರೆ, ಬರೋಬ್ಬರಿ 9 ವರ್ಷಗಳ ಕಾಲ ತೀರ್ಪುಗಾರರಾಗಿದ್ದ ನಟಿ ರಕ್ಷಿತಾ ಪ್ರೇಮ್ ಏಕಾಏಕಿ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ನಟಿ ರಕ್ಷಿತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಮ್ ಸ್ಟೋರಿ
ನಟಿ ರಕ್ಷಿತಾ ಪ್ರೇಮ್ ಪೋಸ್ಟ್‌ನಲ್ಲಿ ಏನಿದೆ?
‘ನಾನು ಕಳೆದ 9 ವರ್ಷದಿಂದ ಕೆಲಸ ಮಾಡುತ್ತಿದ್ದ, ಒಂದು ನಿರ್ದಿಷ್ಟ ಚಾನಲ್‌ನ ಒಂದು ನಿಖರದ ಕಾರ್ಯಕ್ರಮಕ್ಕೆ ನನ್ನ ಟ್ಯಾಗ್ ಮಾಡುತ್ತಿರುವ ಎಲ್ಲರಿಗೂ ನಾನು ಸ್ಪಷ್ಟನೆ ಕೊಡೋಕೆ ಇಷ್ಟಪಡುತ್ತೇನೆ. ನನ್ನ ಜೀವನದಲ್ಲಿ ಹೊಸದನ್ನೇನಾದರೂ ಪ್ರಯತ್ನಿಸಲು ಬದಲಾವಣೆ ಬಯಸಿದ್ದು ಹಾಗೂ ನಾನು ಇನ್ನು ಮುಂದೆ ಆ ಚಾನೆಲ್‌ನ ಭಾಗವಾಗಿರುವುದಿಲ್ಲ’.
‘ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷದ ಪ್ರಯಾಣದಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಮತ್ತು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ ಅಥವಾ ಸಿನಿಮಾದಲ್ಲಿ ಮತ್ತೆ ನಿಮ್ಮ ಮುಂದೆ ಬಂದರು ಇದೆ ರೀತಿಯ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲಿರುತ್ತದೆ ಎಂದು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
‘ಕಾಮಿಡಿ ಕಿಲಾಡಿಗಳು ಸೀಸನ್ 5’ ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್ ಸ್ಥಾನಕ್ಕೆ ಹಿರಿಯ ನಟಿ ತಾರಾ ಅನುರಾಧ ಬಂದಿದ್ದಾರೆ. ಈಗ ತೀರ್ಪುಗಾರರಾಗಿ ಜಗ್ಗೇಶ್, ತಾರಾ ಹಾಗೂ ಯೋಗರಾಜ್ ಭಟ್ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.