
ನಟಿ ದೀಪ್ತಿ ಮಾನೆ ದಂಪತಿ
ಚಿತ್ರ: sara.annaiah
ಕನ್ನಡ ಕಿರುತೆರೆಯಲ್ಲಿ ತುಳಸಿ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ದೀಪ್ತಿ ಮಾನೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ನಟಿಸುವ ಮೂಲಕ ನಟಿ ದೀಪ್ತಿ ಮಾನೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.
ಇದೇ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದಲ್ಲಿ ನಟ ತ್ರಿವಿಕ್ರಮ್ ನಟಿಸಿದ್ದರು. ತುಳಸಿ ಮತ್ತು ಸಾಮ್ರಾಟ್ ಜೋಡಿಗೆ ವೀಕ್ಷಕರು ಪೂರ್ತಿ ಅಂಕ ನೀಡಿದ್ದರು.
ಇದೀಗ ನಟಿ ದೀಪ್ತಿ ಮಾನೆ ಅವರು ರೋಹನ್ ಎಂಬುವವರ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಇನ್ನು, ಈ ಮದುವೆಗೆ ಕನ್ನಡತಿ, ಅಮೃತಧಾರೆ ಧಾರಾವಾಹಿ ಖ್ಯಾತಿಯ ಸಾರಾ ಅಣ್ಣಯ್ಯ ಸೇರಿದಂತೆ ಸಾಕಷ್ಟು ಕಲಾವಿದರು ಬಂದಿದ್ದರು.
ನಟಿ ದೀಪ್ತಿ ಮಾನೆ ಹಾಗೂ ರೋಹನ್ ಮದುವೆಯ ಚಿತ್ರಗಳನ್ನು ಸಾರಾ ಅಣ್ಣಯ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದೇ ಫೋಟೊಗಳು ಹರಿದಾಡುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.