
ಗಿಲ್ಲಿ, ಕಾವ್ಯ
ಬಿಗ್ ಬಾಸ್ ಮನೆಯ ಬಿ.ಬಿ ಕಾಲೇಜ್‌ನಲ್ಲಿ ವಾರ್ಷಿಕೋತ್ಸವ ನಡೆಯುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ (ಗುರುವಾರ) ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿ.ಬಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದ್ದಾರೆ. ಕೆಲವರು ಇಂದಿನ ಸಂಚಿಕೆಯಲ್ಲಿ ಭರ್ಜರಿ ಪ್ರದರ್ಶನ ನೀಡಲಿದ್ದಾರೆ. ಅದರಲ್ಲೂ ವೀಕ್ಷಕರು ಕಾವ್ಯ ಹಾಗೂ ಗಿಲ್ಲಿ ನಟನ ಡ್ಯಾನ್ಸ್‌ಗಾಗಿ ಕಾಯುತ್ತಿದ್ದಾರೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಕಾವ್ಯ ಜೊತೆ ಗಿಲ್ಲಿ ನಟ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲು ಸೂರಜ್ ಜೊತೆಗೆ ಡ್ಯಾನ್ಸ್ ಮಾಡಿದ್ದ ಕಾವ್ಯ ಬಳಿಕ ಗಿಲ್ಲಿ ಜತೆ ಹೆಜ್ಜೆ ಹಾಕಿದ್ದಾರೆ. ಬಿ. ಬಿ ಕಾಲೇಜ್‌ನಲ್ಲಿ ವಾರ್ಷಿಕೋತ್ಸವಕ್ಕೆ ತೀರ್ಪುಗಾರರಾಗಿ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸುಷ್ಮಾ ಕೆ. ರಾವ್ ಮತ್ತು ನಟಿ ಪ್ರಿಯಾ ಆಚಾರ್ ಬಂದಿದ್ದರು.
ಇವರ ಮುಂದೆಯೇ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡಿಗೆ ಗಿಲ್ಲಿ ಹಾಗೂ ಕಾವ್ಯ ಸ್ಟೆಪ್ ಹಾಕಿದ್ದಾರೆ. ಇದೇ ಪ್ರೊಮೋ ನೋಡಿದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.