ADVERTISEMENT

ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಗೋಲ್ಡ್‌ ಸುರೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2024, 10:28 IST
Last Updated 19 ಡಿಸೆಂಬರ್ 2024, 10:28 IST
<div class="paragraphs"><p>ಗೋಲ್ಡ್‌ ಸುರೇಶ್‌</p></div>

ಗೋಲ್ಡ್‌ ಸುರೇಶ್‌

   

ಬೆಂಗಳೂರು: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಮನೆಯ ನಾಯಕನಾಗಿದ್ದಾಗಲೇ ಗೋಲ್ಡ್‌ ಸುರೇಶ್‌ ಏಕಾಏಕಿ ಮನೆಯಿಂದ ಹೊರಬಂದಿದ್ದರು. ಈ ಬಗ್ಗೆ ಅನೇಕ ಊಹಾಪೋಹಗಳು ಹಬ್ಬಿತ್ತು. ಆದರೆ ಬಿಗ್‌ ಬಾಸ್‌ ಮನೆಯಿಂದ ಹೊರಬರಲು ನಿಜವಾದ ಕಾರಣವೇನು ಎನ್ನುವುದನ್ನು ಗೋಲ್ಡ್‌ ಸುರೇಶ್‌ ಅವರೇ ಹೇಳಿದ್ದಾರೆ. 

ಕಲರ್ಸ್‌ ಕನ್ನಡದ ಮೂಲಕ ನೇರಪ್ರಸಾರದಲ್ಲಿ ಮಾತನಾಡಿರುವ ಸುರೇಶ್‌, ತಾವು ನಡೆಸುತ್ತಿರುವ ಉದ್ಯಮಕ್ಕೆ ಸಂಬಂಧಿಸಿದ ತುರ್ತು ಎದುರಾದ ಕಾರಣ ಮನೆಯಿಂದ ಹೊರಬಂದಿರುವುದಾಗಿ ಹೇಳಿದ್ದಾರೆ. 

ADVERTISEMENT

‘ಸ್ವತಃ ನಾನೇ ಒಂದು ಬ್ಯುಸಿನೆಸ್‌ ನಡೆಸುತ್ತಿದ್ದೆ. ಬಿಗ್‌ ಬಾಸ್‌ ಮನೆಗೆ ಹೋಗುವಾಗ ಅದನ್ನು ನನ್ನ ಪತ್ನಿ ನೋಡಿಕೊಳ್ಳುತ್ತಿದ್ದರು. ಆದರೆ ದಿನ ಕಳೆದಂತೆ ಉದ್ಯಮದಲ್ಲಿ ಒತ್ತಡ ಹೆಚ್ಚಾಗಿತ್ತು. ಅದನ್ನು ನಿಭಾಯಿಸಲು ಆಕೆಯೊಬ್ಬಳಿಂದ ಸಾಧ್ಯವಾಗುತ್ತಿರಲಿಲ್ಲ. ನನ್ನ ಅಗತ್ಯ ಎದುರಾಗಿತ್ತು. ಹೀಗಾಗಿ ನಾನು ಶೋ ಬಿಟ್ಟು ಹೊರಬರಬೇಕಾಯಿತು. ಇದನ್ನು ಹೊರತುಪಡಿಸಿ ಯಾವುದೇ ಉಹಾಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಬಿಗ್‌ ಬಾಸ್ ಮನೆ– ಶೋ ಎಷ್ಟು ಮುಖ್ಯವೋ, ನನ್ನ ಉದ್ಯಮ ಮತ್ತು ನನ್ನ ನಂಬಿಕೊಂಡಿರುವ ಹಲವು ಕುಟುಂಬಗಳೂ ಅಷ್ಟೇ ಮುಖ್ಯ. ಅದೇ ಕಾರಣದಿಂದ ಶೋ ದಿಂದ ಹೊರಗಡೆ ಬಂದಿದ್ದೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.