ADVERTISEMENT

7 ವರ್ಷದ ಗೆಳೆಯನ ಜೊತೆ ಸಪ್ತಪದಿ ತುಳಿದ ನಟಿ ರಜಿನಿ: ಸುಂದರ ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 6:06 IST
Last Updated 12 ನವೆಂಬರ್ 2025, 6:06 IST
<div class="paragraphs"><p>ನಟಿ ರಜಿನಿ, ಅರುಣ್ ವೆಂಕಟೇಶ್ ದಂಪತಿ&nbsp;</p></div>

ನಟಿ ರಜಿನಿ, ಅರುಣ್ ವೆಂಕಟೇಶ್ ದಂಪತಿ 

   

ಚಿತ್ರ: ಇನ್‌ಸ್ಟಾಗ್ರಾಮ್

‌ಕನ್ನಡ ಕಿರುತೆರೆಯ ನಟಿ ರಜಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ರಜಿನಿ ಅವರು ಅರುಣ್‌ ವೆಂಕಟೇಶ್ ಎಂಬುವವರ ಜೊತೆಗೆ ಮದುವೆಯಾಗಿದ್ದಾರೆ.

‘ಅಮೃತವರ್ಷಿಣಿ’, ‘ಹಿಟ್ಲರ್ ಕಲ್ಯಾಣ’, ‘ನೀ ಇರಲು ಜೊತೆಯಲಿ’ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿ ರಜಿನಿ ನಟಿಸಿದ್ದಾರೆ.

ಮಾತ್ರವಲ್ಲದೇ ಡ್ಯಾನ್ಸ್‌ ರಿಯಾಲಿಟಿ ಶೋ, ‘ಮಜಾ ಟಾಕೀಸ್’ ಕಾಮಿಡಿ ಶೋನಲ್ಲಿಯೂ ರಜಿನಿ ಭಾಗವಹಿಸಿ ಜನಪ್ರಿಯತೆ ಪಡೆದುಕೊಂಡರು.

ನವೆಂಬರ್‌ 10ರಂದು ನಟಿ ರಜಿನಿ ಅವರು ಅರುಣ್‌ ವೆಂಕಟೇಶ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿವಾಹದಲ್ಲಿ ಕಿರುತೆರೆ ನಟ ಹಾಗೂ ನಟಿಯರು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.

ನಟಿ ರಜಿನಿ ಅವರನ್ನು ಮದುವೆಯಾದ ಅರುಣ್‌ ವೆಂಕಟೇಶ್ ಜಿಮ್ ತರಬೇತುದಾರ ಆಗಿದ್ದಾರೆ. ಬಾಡಿ ಬಿಲ್ಡರ್‌ ಆಗಿರುವ ಅರುಣ್‌ ಜೊತೆಗೆ ರಜಿನಿ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್‌ ಮಾಡುತ್ತ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು.

ಈಗ ನಟಿ ರಜಿನಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ಏಳು ವರುಷದ ಗೆಳೆಯನ ಜೊತೆ ಏಳು ವರ್ಷ ‘ಸಪ್ತಪದಿ’ ತುಳಿದು ಈಗ ಒಂದಾದ ಕ್ಷಣ ಜೀವನದ ಅತ್ಯಮೂಲ್ಯದ ದಿನ ಈ ದಿನಕ್ಕೆ ತುಂಬಾ ಪ್ರೀತಿ ತೋರಿದ ಎಲ್ಲರಿಗು ಚಿರಋಣಿ ಎಂದು ಬರೆದುಕೊಂಡಿದ್ದಾರೆ.

ಸದ್ಯ ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಹಾಗೂ ಕಿರುತೆರೆ ನಟ, ನಟಿಯರು ಶುಭ ಹಾರೈಸುತ್ತಿದ್ದಾರೆ.

ನಟಿ ರಜಿನಿ ಪತಿಯ ಹಣೆಗೆ ಮುತ್ತಿಟ್ಟು ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.