ADVERTISEMENT

ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ನಟಿ ಕಾವ್ಯ ಗೌಡ: ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 11:34 IST
Last Updated 22 ಜನವರಿ 2026, 11:34 IST
<div class="paragraphs"><p>ನಟಿ ಕಾವ್ಯ ಗೌಡ ದಂಪತಿ ಹಾಗೂ ಮಗಳು&nbsp;</p></div>

ನಟಿ ಕಾವ್ಯ ಗೌಡ ದಂಪತಿ ಹಾಗೂ ಮಗಳು 

   

ಚಿತ್ರ: ಇನ್‌ಸ್ಟಾಗ್ರಾಂ

ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು​ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಕಾವ್ಯ ಗೌಡ, ನಟನಾ ಲೋಕಕ್ಕೆ ವಿದಾಯ ಹೇಳಿ ಕುಟುಂಬಸ್ಥರು, ಮಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಫ್ಯಾಷನ್​ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಕಾವ್ಯ ಗೌಡ ದಂಪತಿ ಹಾಗೂ ಮಗಳು ಸಿಯಾ

ನಟಿ ಕಾವ್ಯ ಗೌಡ ತಮ್ಮ ಮುದ್ದಾದ ಮಗಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಜರುಗಿತು. ಅಂದೇ ಕಾವ್ಯ ಗೌಡ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಆ ಮಗುವಿಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಕಾವ್ಯ ಗೌಡ ಮಗಳು ಸಿಯಾ

ಮಗಳಿಗೆ ಸಿಯಾ ಎಂದು ಹೆಸರಿಟ್ಟಿದ್ದಾರೆ. ಹುಟ್ಟುಹಬ್ಬದಂದು ಕಪ್ಪು–ಬಿಳಿ ಸಂಯೋಜನೆಯ ಉಡುಪನ್ನು ಧರಿಸಿ ಮಗಳ ಕೈಯಲ್ಲಿ ಕೇಕ್‌ ಕತ್ತರಿಸಿದ್ದಾರೆ. ಈ ಫೋಟೊ ಹಾಗೂ ವಿಡಿಯೊಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದರ ಜೊತೆಗೆ ‘ಜನ್ಮದಿನದ ಶುಭಾಶಯಗಳು ನನ್ನ ಅಮೂಲ್ಯ ಮಗಳು ಸಿಯಾಗೆ. ನಿನ್ನ ಪ್ರತಿ ನಗು ನನ್ನನ್ನು ಖುಷಿಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ. 2021ರ ಡಿ.1ರಂದು ನಟಿ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕಾವ್ಯ ಗೌಡ ಮಗಳು ಸಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.