ಕಾಕ್ರೋಚ್ ಸುಧಿ ಹಾಗೂ ನಟ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಮ್
ಕನ್ನಡ ಬಿಗ್‌ಬಾಸ್ ಸೀಸನ್ 12 ಶುರುವಾಗಿ ಎರಡು ವಾರ ಕಳೆದಿದೆ. ವಾರದ ಪಂಚಾಯಿತಿ ನಡೆಸಲು ಕಿಚ್ಚ ಸುದೀಪ್ ಬಿಗ್‌ಬಾಸ್ ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ಕಿಚ್ಚ ಸುದೀಪ್, ಕಾಕ್ರೋಚ್ ಸುಧಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಇದೀಗ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ.
ಬಿಡುಗಡೆಯಾದ ಪ‍್ರೊಮೋದಲ್ಲಿ ಕಿಚ್ಚ ಸುದೀಪ್, ‘ಕಾಕ್ರೋಚ್ ಸುಧಿಗೆ ನಾವು ಕೊಟ್ಟ ಪ್ರದರ್ಶನ ಹೇಗಿತ್ತು’ ಎಂದು ಸಹ ಸ್ಪರ್ಧಿಗಳಿಗೆ ಕೇಳಿದ್ದಾರೆ. ಆಗ ಜಾಹ್ನವಿ, ಕ್ರೌರ್ಯ, ಅಟ್ಟಹಾಸ ಕೇವಲ ಮೇಕಪ್‌ಗಷ್ಟೇ ಸೀಮಿತವಾಗಿತ್ತು ಎಂದರು. ಬಳಿಕ ಮಾತನಾಡಿದ ರಾಶಿಕಾ, ಅಸುರ ಎನ್ನುವುದಕ್ಕಿಂತ ಜೋಕರ್ ತರ ಆಡಿದ್ದಾರೆ ಎಂದರು.
ಮನೆಮಂದಿ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಕಾಕ್ರೋಚ್ ಸುಧಿ ಆಕ್ರೋಶಗೊಂಡು, ಅವರ ಕಾಲಿಗೆ ಬಿದ್ದಿಲ್ಲ ಅಷ್ಟೇ. ಇನ್ನು ಹೇಗೆ ಬದುಕಬೇಕು. ಇವರುಗಳ ಜೊತೆಗೆ ಇರೋದಕ್ಕೆ ಆಗೋದಿಲ್ಲ ಅಣ್ಣ ಎಂದು ಕೂಗಾಡಿದ್ದಾರೆ. ಆಗ ಕಿಚ್ಚ, ಶೋ ಗಂಭೀರತೆ ನಿಮಗೆ ಅರ್ಥ ಆಗುತ್ತಿಲ್ಲ ಎಂದರೆ ಮರ್ಯಾದೆಯಿಂದ ಈಗಲೇ ಕಳುಹಿಸಿ ಕೊಡ್ತೀನಿ. ಬಾಗಿಲನ್ನು ಓಪನ್ ಮಾಡಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.