ADVERTISEMENT

PHOTOS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಅಮೃತಧಾರೆ’ ಖ್ಯಾತಿಯ ನಟಿ ಮೇಘಾ ಶೆಣೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 12:27 IST
Last Updated 12 ನವೆಂಬರ್ 2025, 12:27 IST
<div class="paragraphs"><p>ನಟಿ ಮೇಘಾ ಶೆಣೈ </p></div>

ನಟಿ ಮೇಘಾ ಶೆಣೈ

   

ಚಿತ್ರ: ಇನ್‌ಸ್ಟಾಗ್ರಾಮ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್​ ತಂಗಿ ಸುಧಾ ಪಾತ್ರದಲ್ಲಿ ನಟಿ ಮೇಘಾ ಶೆಣೈ ಅಭಿನಯಿಸುತ್ತಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮೇಘಾ ಜನಪ್ರಿಯತೆ ಪಡೆದಿರೋದು ಅಮೃತಧಾರೆಯ ಸುಧಾ ಪಾತ್ರದ ಮೂಲಕ.

ಈಗಾಗಲೇ ಧಾರಾವಾಹಿಯಲ್ಲಿ ಸುಧಾ-ಸೃಜನ್​ ಜೋಡಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸದ್ಯ ನಿಜ ಜೀವನದಲ್ಲಿ ನಟಿ ಮೇಘಾ ಅವರು ಭರತ್‌ ಸಿಂಗ್‌ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ವಿಡಿಯೊವನ್ನು ನಟಿ ಮೇಘಾ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೊ ನೋಡಿದ ಅಭಿಮಾನಿಗಳು, ಸ್ನೇಹಿತರು ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.