ADVERTISEMENT

ಮಗಳ ರಕ್ಷಣೆಗಾಗಿ ಮಹಾಕಾಳಿ ಅವತಾರ ತಾಳಿದ ‘ನಾ ನಿನ್ನ ಬಿಡಲಾರೆ’ ಶರತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2026, 10:24 IST
Last Updated 5 ಫೆಬ್ರುವರಿ 2026, 10:24 IST
<div class="paragraphs"><p>‘ನಾ ನಿನ್ನ ಬಿಡಲಾರೆ’ ಶರತ್</p></div>

‘ನಾ ನಿನ್ನ ಬಿಡಲಾರೆ’ ಶರತ್

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ರೋಚಕ ಸಂಚಿಕೆಗಳು ಪ್ರಸಾರವಾಗುತ್ತಿವೆ. ಮಾಳವಿಕಾ ತನ್ನ ಮೊಮ್ಮಗಳಾದ ಹಿತಾಳನ್ನು ಬಲಿ ಕೊಡಲು ಮುಂದಾಗುತ್ತಾಳೆ. ಮಾಳವಿಕಾ ಕುತಂತ್ರದಿಂದ ಮನೆಯಲ್ಲಿ ಮಲಗಿಕೊಂಡಿದ್ದ ಹಿತಾಳನ್ನು ಅಂಬಿಕಾಳ ಧ್ವನಿಯಲ್ಲಿ ಮಾತನಾಡುವ ಮೂಲಕ ಯಾಮಾರಿಸಿ ಆಕೆಯನ್ನು ಹೊರ ಬರುವಂತೆ ಮಾಡುತ್ತಾಳೆ. ಆಗ ಹಿತಾಳನ್ನು ನಡು ರಸ್ತೆಯಲ್ಲಿ ನೋಡಿದ ಶರತ್‌ ಕಂದಮ್ಮನ‌ನ್ನು ರಕ್ಷಿಸಲು ಮುಂದಾಗುತ್ತಿದ್ದಂತೆ ರೌಡಿಗಳು ದಾಳಿ ಮಾಡುತ್ತಾರೆ.

ADVERTISEMENT

ಶರತ್‌ ಹಾಗೂ ಹಿತಾ ಮೇಲೆ ರೌಡಿಗಳು ಹಲ್ಲೆ ಮಾಡುತ್ತಾರೆ. ರೌಡಿಗಳ ಅಟ್ಟಹಾಸಕ್ಕೆ ಶರತ್‌ ಕುಸಿದು ಬೀಳುತ್ತಾನೆ. ಆಗ ಹಿತಾ ಅಪ್ಪಾ... ಎಂದು ಕೂಗಿ ಮೂರ್ಛೆ ಹೋಗುತ್ತಾಳೆ. ಇದೇ ವೇಳೆ ಮಗಳ ರಕ್ಷಣೆಗಾಗಿ ಶರತ್ ಕಾಳಿಯ ಅವತಾರ ತಾಳಿ, ರೌಡಿಗಳನ್ನು ಮಟ್ಟ ಹಾಕಲು ಸಿದ್ಧನಾಗುತ್ತಾನೆ. ಕಷ್ಟದಲ್ಲಿದ್ದ ಮಗಳನ್ನು ದುಷ್ಟರ‌ನ್ನು ಶಿಕ್ಷಿಸಲು ಅಪ್ಪನೇ ಮಹಾಕಾಳಿ ರೂಪದಲ್ಲಿ ಬಂದು ಹಿತಾಳ ಪ್ರಾಣ ಕಾಪಾಡುವಂತೆ ತೋರಿಸಲಾಗಿದೆ. ಮೈ ಜುಮ್ ಎನ್ನಿಸುವ ಸಂಚಿಕೆಯ ಪ್ರೋಮೊವನ್ನು ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ.

ಶರತ್ 

ಶರತ್, ಕಾಳಿ ಅವತಾರ ತಾಳುವ ಪ್ರೊಮೊ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದೇ ವಿಡಿಯೊ ನೋಡಿದ ವೀಕ್ಷಕರು ಕಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲದೇ ನಾ ನಿನ್ನ ಬಿಡಲಾರೆ ಧಾರಾವಾಹಿಯ ಬಗ್ಗೆ ಹೊಗಳುತ್ತಿದ್ದಾರೆ. ಕುತಂತ್ರದಿಂದ ಹಿತಾಳನ್ನು ಬಲಿ ಕೊಡಲು ಮುಂದಾಗಿರುವ ಮಾಳವಿಕಾ ಬಗ್ಗೆ ಕೆಂಡ ಕಾರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.