ADVERTISEMENT

ಸ್ಟೈಲಿಶ್ ಲುಕ್‌ನಲ್ಲಿ ‘ನಾ ನಿನ್ನ ಬಿಡಲಾರೆ’ ದುರ್ಗಾ: ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 12:12 IST
Last Updated 3 ಫೆಬ್ರುವರಿ 2026, 12:12 IST
<div class="paragraphs"><p>ನಟಿ&nbsp; ರಿಷಿಕಾ</p></div>

ನಟಿ  ರಿಷಿಕಾ

   

ಚಿತ್ರ: ಇನ್‌ಸ್ಟಾಗ್ರಾಂ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿರುವ ದುರ್ಗಾ ಪಾತ್ರಧಾರಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

‘ನಾ ನಿನ್ನ ಬಿಡಲಾರೆ’ಯಲ್ಲಿ ದುರ್ಗಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ರಿಷಿಕಾ. ಇವರು ಶಿವಮೊಗ್ಗ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದು, ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

‘ಕನ್ಯಾಕುಮಾರಿ’ ಹಾಗೂ ‘ಕನ್ಯಾದಾನ’ ಧಾರಾವಾಹಿಗಳಲ್ಲಿ ನಟಿಸಿದ್ದ ರಿಷಿಕಾ ಅವರು ನಾ ನಿನ್ನ ಬಿಡಲಾರೆಯಲ್ಲಿ ಪ್ರಮುಖ ಪಾತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಟಿ ರಿಷಿಕಾ ಅವರ ಅಭಿನಯ ವೀಕ್ಷಕರ ಮನ ಗೆದ್ದಿದೆ. ಸದ್ಯ ನಟಿ ಹೊಸ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಅದೇ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಲಾಂಗ್‌ ಗೌನ್‌ನಲ್ಲಿ ನಟಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನಟಿ ರಿಷಿಕಾ ಅವರು 1 ಲಕ್ಷ 16 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.