ADVERTISEMENT

ನಾಗಿಣಿ -2ಗೆ ವೀಕ್ಷಕರು ಫಿದಾ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:30 IST
Last Updated 20 ಫೆಬ್ರುವರಿ 2020, 19:30 IST
ನಾಗಿಣಿ 2 ಧಾರಾವಾಹಿಯ ಪೋಸ್ಟರ್‌
ನಾಗಿಣಿ 2 ಧಾರಾವಾಹಿಯ ಪೋಸ್ಟರ್‌   

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ, ಕಿರುತೆರೆ ಲೋಕದಲ್ಲಿ ದಾಖಲೆ ಸೃಷ್ಟಿಸಿದ ‘ನಾಗಿಣಿ’ ಧಾರಾವಾಹಿ, ಇದೀಗ ‘ನಾಗಿಣಿ-2’ ಆಗಿ ಮತ್ತೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.ಕುತೂಹಲ ಮೂಡಿಸುವಂತಹ ಚಿತ್ರಕಥೆ, ಹೆಸರಾಂತ ಕಲಾವಿದರ ತಾರಾಬಳಗ, ನೈಜ ಅನಿಸುವಂಥ ಗ್ರಾಫಿಕ್ಸ್ ಮತ್ತು ಅದ್ಧೂರಿಸೆಟ್ ಹಾಗೂ ಹೊಸತನ ಎನಿಸುವಂಥ ಮೇಕಿಂಗ್‍ನಿಂದಾಗಿ ‘ನಾಗಿಣಿ 2’ ವಿಶೇಷ ಅನಿಸಿದೆ.

ಕನ್ನಡ ಕಿರುತೆರೆ ಲೋಕದಲ್ಲಿ ನಾನಾ ಪ್ರಯೋಗಗಳನ್ನು ಮಾಡಿರುವ ಜೀ ಕನ್ನಡ ವಾಹಿನಿ ‘ನಾಗಿಣಿ-2’ ಬಿಡುಗಡೆಯನ್ನುವಿಶೇಷ ರೀತಿಯಲ್ಲಿ ಆಯೋಜಿಸಿತ್ತು. ಕಿರುತೆರೆ ಲೋಕದಲ್ಲೇ ಪ್ರಥಮ ಎನ್ನುವಂತೆ ಈ ಧಾರಾವಾಹಿಯ ಪ್ರೀಮಿಯರ್ ಶೋ ಅನ್ನು ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಮೈಸೂರು, ಶಿವಮೊಗ್ಗ, ಗದಗ ಮತ್ತು ಹಾಸನದಲ್ಲಿಮಲ್ಟಿಫ್ಲೆಕ್ಸ್‌ಚಿತ್ರಮಂದಿರಗಳಲ್ಲಿ ಆಯೋಜಿಸಿದ್ದ‘ನಾಗಿಣಿ-2’ ಧಾರಾವಾಹಿಯ ವಿಶೇಷ ಪ್ರದರ್ಶನದಲ್ಲಿ ಜೀ ಕನ್ನಡ ವಾಹಿನಿಯ ಸ್ಪಂದನಾ ಮಹಿಳಾ ಕ್ಲಬ್ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಈ ಧಾರಾವಾಹಿಯ ಕೆಲವು ಎಪಿಸೋಡ್‌ಗಳನ್ನು ವೀಕ್ಷಿಸಿ ಖುಷಿ ಪಟ್ಟರು. ಗ್ರಾಫಿಕ್ಸ್, ದೃಶ್ಯ ವೈಭವ, ಕುತೂಹಲ ಮೂಡಿಸುವಂತಹ ಕಥೆ ಮತ್ತು ಕಲಾವಿದರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಈ ಧಾರಾವಾಹಿಯಲ್ಲಿ ಅನೇಕ ಕೌತುಕದ ವಿಷಯಗಳಿವೆ. ಪವಿತ್ರ ಹುಣ್ಣಿಮೆ ದಿನದಂದು ನಾಗಮಣಿಯನ್ನು ಹೊರಗಿಟ್ಟು ಮೈ ಮರೆಯುವ ಹಾವುಗಳು, ನಾಗಮಣಿಯನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಅದಕ್ಕಾಗಿ ವಿಶೇಷ ಸೆಟ್ ಕೂಡ ಹಾಕಲಾಗಿದೆ. ಜತೆಗೆ ಪ್ರತಿ ಸಂಚಿಕೆಯನ್ನೂ ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ.

ಫೆ.17ರಿಂದ ಶುರುವಾಗಿರುವ ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.