ADVERTISEMENT

ಬಿಗ್ ಬಾಸ್ ತೆಲುಗು ಸೀಸನ್-8: ಪ್ರಶಸ್ತಿ ಗೆದ್ದ ಕರ್ನಾಟಕ ಮೂಲದ ನಿಖಿಲ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 8:26 IST
Last Updated 16 ಡಿಸೆಂಬರ್ 2024, 8:26 IST
<div class="paragraphs"><p>@StarMaa</p></div>
   

@StarMaa

ಬೆಂಗಳೂರು: ಸೂಪರ್ ಸ್ಟಾರ್ ನಾಗಾರ್ಜುನ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತೆಲುಗು ಸೀಸನ್ 8 ‌ ಡಿಸೆಂಬರ್ 15ಕ್ಕೆ ಕೊನೆಗೊಂಡಿತು. ಭಾನುವಾರ ನಡೆದ ಫಿನಾಲೆಯಲ್ಲಿ ಕರ್ನಾಟಕ ಮೂಲದ ತೆಲುಗು ನಟ ನಿಖಿಲ್ ಮಲಿಯಕ್ಕಲ್ ಪ್ರಥಮ ಬಹುಮಾನ ಪಡೆದು ಬಿಗ್ ಬಾಸ್ ಟ್ರೋಫಿ, 55 ಲಕ್ಷ ನಗದು ಬಹುಮಾನ ಮತ್ತು ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಾಮ್ ಚರಣ್ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಿರುವ ಅವರು ಸಂಪೂರ್ಣ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಬರಿಗಾಲಿನಲ್ಲಿ ವೇದಿಕೆಗೆ ತೆರಳಿ ಅವರ ಮುಂಬರುವ ‘ಗೇಮ್ ಚೇಂಜರ್’ ಚಿತ್ರವನ್ನು ಪ್ರಚಾರ ಮಾಡಿದರು.

ADVERTISEMENT

ಈ ಬಾರಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಹೊಸ ಟ್ವಿಸ್ಟ್‌ ಇಡಲಾಗಿತ್ತು, ಫೈನಲ್‌ಗೆ ಬಂದಿದ್ದ ಇಬ್ಬರು ಸ್ಪರ್ಧಿಗಳಾದ ನಿಖಿಲ್‌ ಮಲಿಯಕ್ಕಲ್ ಮತ್ತು ಗೌತಮ್ ಕೃಷ್ಣ ಅವರಿಗೆ ವಿಶೇಷ ಅವಕಾಶ ನೀಡಲಾಯಿತು. ಫೈನಲಿಸ್ಟ್‌ಗಳ ಪೈಕಿ ಒಬ್ಬರು ₹55 ಲಕ್ಷ ಬಹುಮಾನದ ಮೊತ್ತವನ್ನು ಆಯ್ಕೆ ಮಾಡಬಹುದು, ಇನ್ನೊಬ್ಬರು ಟ್ರೋಫಿ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂಬ ಆಫರ್‌ ನೀಡಲಾಯಿತು. ಆದರೆ ಅಂತಿಮ ಸ್ಪರ್ಧಿಗಳಿಬ್ಬರೂ ಆಫರ್ ಅನ್ನು ನಿರಾಕರಿಸಿದರು.

ಅಂತಿಮವಾಗಿ ರಾಮ್ ಚರಣ್ ನಿಖಿಲ್ ಮಲಿಯಕ್ಕಲ್‌ರನ್ನು ಬಿಗ್ ಬಾಸ್ ತೆಲುಗು ಸೀಸನ್ 8ರ ವಿನ್ನರ್‌ ಮತ್ತು ಗೌತಮ್ ಕೃಷ್ಣ ಮೊದಲ ರನ್ನರ್ ಅಪ್ ಎಂದು ಘೋಷಿಸಿದರು.

ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ತಮ್ಮ ಗೆಲುವನ್ನು ಅರ್ಪಿಸಿ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

105 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ನಬೀಲ್, ಪ್ರೇರಣಾ ಮತ್ತು ಅವಿನಾಶ್ ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ರನ್ನರ್–ಅಪ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.