ನಟಿ ಪವಿತ್ರಾ ನಾಯ್ಕ್
ಚಿತ್ರ: pavithrabnaik
ಪಾರು ಧಾರಾವಾಹಿಯ ಮೂಲಕ ಮನೆ ಮಾತಾಗಿರುವ ನಟಿ ಪವಿತ್ರಾ ಬಿ ನಾಯ್ಕ್ ಖುಷಿಯಲ್ಲಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯ ಮೂಲಕ ನಟಿ ಪವಿತ್ರಾ ಬಿ ನಾಯ್ಕ್ ಜನಪ್ರಿಯತೆ ಪಡೆದಕೊಂಡಿದ್ದಾರೆ.
ಪಾರು ಧಾರಾವಾಹಿಯಲ್ಲಿ ಜನನಿ ಪಾತ್ರದಲ್ಲಿ ನಟಿ ಪವಿತ್ರಾ ಅವರು ನಟಿಸುತ್ತಿದ್ದರು.
ಇದೀಗ ನಟಿ ಪವಿತ್ರಾ ಬಿ ನಾಯ್ಕ್ ಅವರು ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.
ಗೃಹ ಪ್ರವೇಶದ ಸಂಭ್ರಮದಲ್ಲಿದ್ದ ನಟಿ ಪವಿತ್ರ ನಾಯ್ಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ನಟಿ ಪವಿತ್ರಾ ಅವರು ತಮ್ಮ ಹೊಸ ಮನೆಗೆ ನಂದ ಕೃಪ ಎಂದು ಹೆಸರಿಟ್ಟಿದ್ದಾರೆ.
ಸದ್ಯ ನಟಿ ಪವಿತ್ರಾ, ಪಾರು ಧಾರಾವಾಹಿ ಮುಕ್ತಾಯದ ಬಳಿಕ ಪರಭಾಷೆಯತ್ತ ಮುಖ ಮಾಡಿದ್ದಾರೆ.
ಇನ್ನು, ನಟಿ ಪವಿತ್ರಾ ಬಿ.ನಾಯ್ಕ್ ಅವರು ರಕ್ಷಾ ಬಂಧನ ಧಾರಾವಾಹಿ ಮೂಲಕ ಕಿರುತೆರೆಗೆ ಲೋಕಕ್ಕೆ ಕಾಲಿಟ್ಟರು.
ಆದರೆ, ರಕ್ಷಾ ಬಂಧನ ಧಾರಾವಾಹಿ ಕಡಿಮೆ ಸಮಯದಲ್ಲಿ ಮುಕ್ತಾಯ ಕಂಡಿತ್ತು.
ಇದಾದ ಬಳಿಕ ಪವಿತ್ರಾ ಅವರು ಪಾರು ಧಾರಾವಾಹಿಯಲ್ಲಿ ಜನನಿ ಪಾತ್ರಕ್ಕೆ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.