ADVERTISEMENT

ಪ್ರತಿಮಾ ಬೆನ್ನಲ್ಲೆ ಕಿರುತೆರೆ ಲೋಕಕ್ಕೆ ನಟನಾಗಿ ರೋಹನ್‌ ರಾಜ್‌ ಪದಾರ್ಪಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 10:32 IST
Last Updated 24 ಫೆಬ್ರುವರಿ 2026, 10:32 IST
<div class="paragraphs"><p>ಪ್ರತಿಮಾ,&nbsp;ರೋಹನ್‌ ರಾಜ್‌</p></div>

ಪ್ರತಿಮಾ, ರೋಹನ್‌ ರಾಜ್‌

   

ಚಿತ್ರ: ಇನ್‌ಸ್ಟಾಗ್ರಾಂ

ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ರೋಹನ್‌ ರಾಜ್‌ ಯಾರೆಂದು ಗೊತ್ತಿರುತ್ತದೆ. ರೀಲ್ಸ್, ಕಂಟೆಂಟ್ ಕ್ರಿಯೇಟರ್, ಕಿರುಚಿತ್ರ ಹೀಗೆ ಸಾಲು ಸಾಲು ವಿಡಿಯೊಗಳನ್ನು ಮಾಡುವ​​ ಮೂಲಕ ಗಮನ ಸೆಳೆದಿರುವ ರೋಹನ್‌ ರಾಜ್‌ ಈಗ ಕಿರುತೆರೆ ಲೋಕಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ.

ADVERTISEMENT

ರೀಲ್ಸ್ ಸ್ಟಾರ್‌ ರೋಹನ್‌ ರಾಜ್‌ ಅವರಿಗೆ ಬಂಪರ್ ಅವಕಾಶವೊಂದು ಒಲಿದಿದೆ. ರೋಹನ್‌ ರಾಜ್‌ ಈಗ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೊ ಕೂಡ ಬಿಡುಗಡೆಯಾಗಿದೆ. ಪ್ರೊಮೋ ನೋಡಿದ ನೆಟ್ಟಿಗರು, ಸ್ನೇಹಿತರು ರೋಹನ್‌ ರಾಜ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಯಾವುದು ಆ ಧಾರಾವಾಹಿ?

ಉದಯ ವಾಹಿನಿಯಲ್ಲಿ ‘ಕೃಷ್ಣವಂಶಿ’ ಎಂಬ ಹೊಸ ಧಾರಾವಾಹಿ ಮಾರ್ಚ್‌ 2ರಿಂದ ಪ್ರಸಾರವಾಗಲಿದೆ. ಇದೇ ಧಾರಾವಾಹಿಗೆ ರೋಹನ್‌ ರಾಜ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಿರುತೆರೆ ಲೋಕಕ್ಕೆ ನಟನಾಗಿ ಪಯಣ ಶುರುಮಾಡಿದ್ದಾರೆ. ‌ಇದರಲ್ಲಿ ಕೃಷ್ಣ ಪಾತ್ರಕ್ಕೆ ರೋಹನ್ ಜೀವ ತುಂಬಿದ್ದಾರೆ. ನಾಯಕಿ ಪಾತ್ರಕ್ಕೆ ಶ್ರದ್ಧಾ ಪುಂಡಿ ಅವರು ಬಣ್ಣ ಹಚ್ಚಿದ್ದಾರೆ. ತಂದೆ ಪಾತ್ರಕ್ಕೆ ಭಾರ್ಗವಿ ಎಲ್‌.ಎಲ್‌.ಬಿ ಖ್ಯಾತಿಯ ಹನುಮಂತೇಗೌಡ ಅವರು ಜೀವ ತುಂಬಿದ್ದಾರೆ. ತಾಯಿ ಪಾತ್ರದಲ್ಲಿ ಹಂಸ ಅಭಿನಯಿಸುತ್ತಿದ್ದಾರೆ.

ಧಾರಾವಾಹಿ ಕಥೆ ಏನು?

ಕೃಷ್ಣ ಹುಡಿಗಿಯರು ಎಂದರೆ ನೂರು ಮೈಲಿ ದೂರ ಓಡುವ ನಾಚಿಕೆ ಸ್ವಭಾವದ ಹುಡುಗ. ಚಿಕ್ಕ ಹೋಟೆಲ್ ಮುನ್ನಡೆಸಿಕೊಂಡು ಹೋಗುತ್ತಿರುವ ಈತನಿಗೆ ಹುಡುಗಿಯರೆಂದರೆ ಭಯ.

ಈಗಾಗಲೇ ರೋಹನ್‌ ರಾಜ್‌ ಅವರು ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷದ 72 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಇವರು ‘ಮುದ್ದು ಸೊಸೆ’ ಧಾರಾವಾಹಿ ನಟಿ ಪ್ರತಿಮಾ ಅವರ ಆಪ‍್ತ ಸ್ನೇಹಿತರಾಗಿದ್ದಾರೆ. ನಟಿ ಪ್ರತಿಮಾ ಬೆನ್ನಲ್ಲೆ ಗೆಳೆಯ ರೋಹನ್ ರಾಜ್ ಕೂಡ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.