ADVERTISEMENT

ಕತ್ರೀನಾ ಕೈಫ್‌ಗೆ ಕೊನೆಗೂ ಮದುವೆ ಶುಭಾಶಯ ಹೇಳಿದ ಮಾಜಿ ಪ್ರಿಯಕರ ಸಲ್ಮಾನ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2022, 8:39 IST
Last Updated 2 ಫೆಬ್ರುವರಿ 2022, 8:39 IST
ಕತ್ರೀನಾ ಕೈಫ್, ವಿಕ್ಕಿ ಕೌಶಲ್
ಕತ್ರೀನಾ ಕೈಫ್, ವಿಕ್ಕಿ ಕೌಶಲ್   

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗೆಳತಿ ಕತ್ರೀನಾ ಕೈಫ್, ವಿಕ್ಕಿ ಕೌಶಲ್ ಜತೆ ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್, ಕೊನೆಗೂ ಗೆಳತಿಗೆ ಮದುವೆಯ ಶುಭಾಶಯ ಕೋರಿದ್ದಾರೆ.

ಬಿಗ್ ಬಾಸ್ ಹಿಂದಿ ಸೀಸನ್ 15ರ ಫಿನಾಲೆಯಲ್ಲಿ ಸಲ್ಮಾನ್ ಖಾನ್, ಕತ್ರೀನಾರನ್ನು ಉದ್ದೇಶಿಸಿ, ‘ಕತ್ರೀನಾ, ಶಾದಿ ಮುಬಾರಕ್ ಹೋ‘ ಎಂದು ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮದಲ್ಲಿ ರುಬಿನಾ ದಿಲೈಕ್ ಮತ್ತು ರಾಖಿ ಸಾವಂತ್, ಕತ್ರೀನಾ ಅವರ ಜನಪ್ರಿಯ ‘ಚಿಕ್ನಿ ಚಮೇಲಿ‘ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕತ್ರೀನಾರನ್ನು ನೆನಪಿಸಿಕೊಂಡ ಸಲ್ಮಾನ್ ಖಾನ್, ಮದುವೆಯ ಶುಭಾಶಯ ತಿಳಿಸಿದ್ದಾರೆ.

ADVERTISEMENT

ಕತ್ರೀನಾ ಕೈಫ್ ಮತ್ತು ಸಲ್ಮಾನ್ ಖಾನ್ ಜತೆಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ಆದರೆ ಕತ್ರೀನಾ ಕೈಫ್, ವಿಕ್ಕಿ ಕೌಶಲ್ ಜತೆ ಕಳೆದ ವರ್ಷ ಡಿಸೆಂಬರ್ 9ರಂದು ಮದುವೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.