
ನಟಿ ಮಾನಸಾ ಮನೋಹರ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಕಿರುರೆತೆ ನಟಿ ಮಾನಸಾ ಮನೋಹರ್ ದಂಪತಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಈ ವಿಚಾರವನ್ನು ನಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ಮಾನಸಾ ಮನೋಹರ್ ಅವರು ಸೀಮಂತ ಸಂಭ್ರಮದಲ್ಲಿದ್ದಾರೆ.
ನಟಿ ಮಾನಸಾ ಮನೋಹರ್
ಮಾನಸಾ ಮನೋಹರ್ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ‘ಮೀರಾ’ ಪಾತ್ರದಲ್ಲಿ ನಟಿಸಿ ಬಳಿಕ ‘ಲಕ್ಷ್ಮೀ ನಿವಾಸ’ದಲ್ಲಿ ಖಳನಾಯಕಿಯಾಗಿ ನೀಲು ಪಾತ್ರದ ಮೂಲಕ ರಂಜಿಸಿದ್ದರು. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಎಂಬುವವರ ಜೊತೆಗೆ ಎರಡನೇ ಮದುವೆಯಾಗಿದ್ದರು. ಸದ್ಯ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನಟಿ ಮಾನಸಾ ಮನೋಹರ್ ಕುಟುಂಬ
ಪತ್ನಿಯ ಸೀಮಂತದ ಫೋಟೊಗಳನ್ನು ಪತಿ ಪ್ರೀತಂ ಚಂದ್ರ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿಯ ಸೀಮಂತದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.