ADVERTISEMENT

PHOTOS | ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 12:31 IST
Last Updated 16 ಸೆಪ್ಟೆಂಬರ್ 2025, 12:31 IST
<div class="paragraphs"><p>ಕನ್ನಡ ಕಿರುತೆರೆ ನಟಿ&nbsp;ಶ್ವೇತಾ ಚೆಂಗಪ್ಪ ತಮ್ಮ ಮುದ್ದಾದ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.&nbsp;</p></div>

ಕನ್ನಡ ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ತಮ್ಮ ಮುದ್ದಾದ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 

   

ಚಿತ್ರ ಕೃಪೆ: swethachangappa

ಶ್ವೇತಾ ಚೆಂಗಪ್ಪ ಅವರು ನಟಿ, ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದಾರೆ.

ADVERTISEMENT

ಆಗಾಗ ಪತಿ ಹಾಗೂ ಮಗನ ಜೊತೆಗೆ ದೇಶ ವಿದೇಶ ‌ಸುತ್ತುತ್ತಾ ಇರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಶ್ವೇತಾ ಚೆಂಗಪ್ಪ ಈಗ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಪತಿ ಕಿರಣ್ ಅಪ್ಪಚ್ಚು ಹಾಗೂ ಶ್ವೇತಾ ಚೆಂಗಪ್ಪ ದಂಪತಿಗೆ ಜಿಯಾನ್ ಅಯ್ಯಪ್ಪ ಎಂಬ ಮುದ್ದಾದ ಪುತ್ರನಿದ್ದಾನೆ.

ಇದೀಗ ಜಿಯನ್‌ ಅಯ್ಯಪ್ಪಗೆ 6 ವರ್ಷ ತುಂಬಿದೆ. ಹೀಗಾಗಿ ಮಗನ ಆರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಶ್ವೇತಾ ಚೆಂಗಪ್ಪ ಅವರ ಮಗ ಜಿಯನ್‌ ಅಯ್ಯಪ್ಪ ಹುಟ್ಟುಹಬ್ಬದಲ್ಲಿ ಪುಟಾಣಿ ಮಕ್ಕಳು ಕೂಡ ಭಾಗಿಯಾಗಿದ್ದರು.

ಶ್ವೇತಾ ಚೆಂಗಪ್ಪ ಹಾಗೂ ಕಿರಣ್‌ ಅಪ್ಪಚ್ಚು ತಮ್ಮ ಆಪ್ತರೊಂದಿಗೆ ಫೋಟೊದಲ್ಲಿ ಮಿಂಚಿದ್ದಾರೆ.

ಮಗನ ಹುಟ್ಟುಹಬ್ಬದಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪತಿ ಕಿರಣ್ ಹಾಗೂ ಮಗನ ಜೊತೆಗೆ ನಟಿ ಶ್ವೇತಾ ಚೆಂಗಪ್ಪ ಮಿಂಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.