ADVERTISEMENT

ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 10:22 IST
Last Updated 6 ಫೆಬ್ರುವರಿ 2026, 10:22 IST
<div class="paragraphs"><p>ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA </p></div>

ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

   

ಬೆಂಗಳೂರು: ಮೃಗಾಲಯಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸುವ ಬಗ್ಗೆ ವರದಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜಡ್‌ಎ) ಉಪ ಸಮಿತಿಯನ್ನು ರಚಿಸಿದೆ.

ಮೃಗಾಲಯಗಳನ್ನು ಕೇವಲ ಜನಾಕರ್ಷಣೆಯ ಕೇಂದ್ರವಾಗಿ ಮಾಡುವ ಬದಲು ಪ್ರಾಣಿಗಳನ್ನು ಅರಿತುಕೊಳ್ಳುವ ಕೇಂದ್ರವಾಗಿ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಸಿಎಸ್‌ಆರ್‌ ನಿಧಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಲಿಯ ಸ್ಥಾಯಿ ಸಮಿತಿಯ ರೀತಿಯಲ್ಲೇ ಸಿಜಡ್‌ಎ ಸಭೆಯನ್ನು ನಡೆಸಲು  ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 43ನೇ ಸಿಜಡ್‌ಎ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದರ್‌ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತದ ಮೃಗಾಲಯಗಳನ್ನು ವಿಶ್ವದರ್ಜೆಗೆ ಏರಿಸಬೇಕಾದರೆ ಯಾವ ರೀತಿಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪರಿಸರ ಸಮತೋಲನಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ಯಾವ ಕಾರಣಕ್ಕೆ ಮಾಡಬೇಕು ಎನ್ನುವ ಅರಿವನ್ನು ವನ್ಯಜೀವಿಗಳ ವೀಕ್ಷಣೆಗಾಗಿ ಮೃಗಾಲಯಗಳಿಗೆ ಭೇಟಿ ನೀಡುವವರಿಗೆ ಅರಿವು ಮೂಡಿಸಬೇಕು. ಇದಕ್ಕಾಗಿ ಪ್ರತಿಯೊಂದು ಪ್ರಾಣಿ– ಪಕ್ಷಿಗಳ ಮಹತ್ವವನ್ನು ತಿಳಿಹೇಳುವ ದಿನಾಂಕವನ್ನು ನಿಗದಿಪಡಿಸಬೇಕು. ಈ ಕಾರ್ಯಕ್ರಮಗಳು ವರ್ಷಪೂರ್ತಿ ಇರುವಂತೆ ನೋಡಿಕೊಳ್ಳುವ ನೀತಿಯ ಬಗ್ಗೆ ಚರ್ಚಿಸಲಾಗಿದೆ.

ಆದರೆ ಯುವ ಪೀಳಿಗೆಯು ಮೊಬೈಲ್‌, ಟಿ.ವಿಗಳಲ್ಲೇ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇವರನ್ನು ನಿಸರ್ಗದತ್ತ ಸೆಳೆಯಲು ಮೃಗಾಲಯ ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಕಾರಣದಿಂದ ಸಿಎಸ್‌ಆರ್‌ ನಿಧಿ ಪಡೆಯಬೇಕು ಎಂದು ತೀರ್ಮಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.