ಕಬಿನಿ ಬಳಿ ಮರಿ ಕಚ್ಚಿಕೊಂಡು ರಸ್ತೆ ದಾಟಿದ ಹುಲಿ
ಜೆಎಲ್‌ಆರ್ ಸಿಬ್ಬಂದಿ ಚಿತ್ರ
ಬೆಂಗಳೂರು: ಮೂರು ಮರಿಗಳೊಂದಿಗೆ ಹುಲಿ ಗಾಂಭೀರ್ಯದಲ್ಲಿ ರಸ್ತೆ ದಾಟಿದ ದೃಶ್ಯ ಕಬಿನಿಯಲ್ಲಿ ಶುಕ್ರವಾರ ಕಂಡುಬಂತು.
ಪ್ರವಾಸಿಗರು ಓಡಾಡುವ ಪ್ರದೇಶದಲ್ಲಿ ಇಂಥದ್ದೊಂದು ದೃಶ್ಯ ಅಪರೂಪದಲ್ಲಿ ಅಪರೂಪ ಎಂದೇ ಹೇಳಲಾಗುತ್ತದೆ. ಪ್ರವಾಸಿಗರು ಸಫಾರಿಗೆ ತೆರಳಿದ ಸಂದರ್ಭದಲ್ಲಿ ಒಂದು ಮರಿಯನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಹುಲಿ ರಸ್ತೆ ದಾಟಿತು.
ತಾಯಿಯನ್ನು ಅನುಸರಿಸಿದ ಇನ್ನೆರಡು ಮರಿಗಳೂ ಹೆಚ್ಚಿನ ಅವಸರವಿಲ್ಲದೆ ರಸ್ತೆ ದಾಟಿದ್ದನ್ನು ಕಂಡ ಪ್ರವಾಸಿಗರಲ್ಲಿ ಸಂಭ್ರಮ ಮನೆ ಮಾಡಿತು. ಕ್ಯಾಮೆರಾಗಳು ವಿರಮಿಸದೆ ಪಿಳುಗುಟ್ಟವು. ಈ ದೃಶ್ಯ ಪ್ರವಾಸಿಗರಿಗೆ ಮಾತ್ರವಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗೂ ಅಚ್ಚರಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.