ADVERTISEMENT

ನರೇಗಾ vs ವಿಬಿ–ಜಿ ರಾಮ್‌ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ

ಏಜೆನ್ಸೀಸ್
Published 17 ಡಿಸೆಂಬರ್ 2025, 11:46 IST
Last Updated 17 ಡಿಸೆಂಬರ್ 2025, 11:46 IST
<div class="paragraphs"><p>ನರೇಗಾ vs ವಿಬಿ–ಜಿ ರಾಮ್‌</p></div>

ನರೇಗಾ vs ವಿಬಿ–ಜಿ ರಾಮ್‌

   

ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆ, 2025’ಯನ್ನು ಮಂಡಿಸಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಸೂದೆಯನ್ನು ಮಂಡಿಸಿದರು. ನರೇಗಾ ಕಾಯ್ದೆಯ ಹೆಸರನ್ನು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ ಎಂಬ ಹೆಸರಿಡಲು ಈ ಮೊದಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಕೇಂದ್ರವು ನರೇಗಾ ಕಾಯ್ದೆಯನ್ನೇ ಹಿಂಪಡೆಯಲು ಹೊಸ ಮಸೂದೆ ಮಂಡಿಸಿದೆ.

ADVERTISEMENT

ಈ ಹೊಸ ಮಸೂದೆಯಲ್ಲಿ ವರ್ಷದಲ್ಲಿ 100 ದಿನಗಳ ಕೆಲಸದ ಅವಧಿಯನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ.

2009ರಲ್ಲಿ ಮಹಾತ್ಮಗಾಂಧಿಗೆ ಗೌರವ ಸೂಚಕವಾಗಿ ಆಗಿನ ಯುಪಿಎ ಸರ್ಕಾರ ನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ಸೇರಿಸಿತ್ತು. ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ಈ ಘೋಷಣೆ ಮಾಡಿದ್ದರು.

ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ಮಸೂದೆಯಲ್ಲಿ ಒಂದಷ್ಟು ಬದಲಾವಣೆಗಳನ್ನೂ ಮಾಡಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಈ ಮಸೂದೆ ಉದ್ಯೋಗದ ಸೃಷ್ಟಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲದ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಹೇಳಿದೆ. ಅದರಲ್ಲಿ ಮುಖ್ಯವಾಗಿ ನೀರಿನ ಕೊರತೆಯನ್ನು ನೀಗಿಸುವ ಕೆಲಸಗಳು, ಮೂಲಸೌಕರ್ಯಗಳು ಮತ್ತು ದೈನಂದಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಪ್ರಕೃತಿ ವಿಕೋಪಗಳನ್ನು ತಗ್ಗಿಸುವ ಕ್ರಮಗಳ ಜಾರಿಗೆ ಒತ್ತು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.