ADVERTISEMENT

ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿರ್ಬಂಧ; ಆಸ್ಟ್ರೇಲಿಯಾ ಹಾದಿಯಲ್ಲಿರುವ ದೇಶಗಳಿವು

ಏಜೆನ್ಸೀಸ್
Published 18 ಫೆಬ್ರುವರಿ 2026, 6:10 IST
Last Updated 18 ಫೆಬ್ರುವರಿ 2026, 6:10 IST
<div class="paragraphs"><p>ಸಾಮಾಜಿಕ ಮಾಧ್ಯಮಗಳು</p></div>

ಸಾಮಾಜಿಕ ಮಾಧ್ಯಮಗಳು

   

ಗೆಟ್ಟಿ ಚಿತ್ರ

16 ವರ್ಷದೊಳಗಿನ ಮಕ್ಕಳಿಗೆ ಟಿಕ್‌ಟಾಕ್‌, ಯುಟ್ಯೂಬ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿದ ಮೊದಲ ದೇಶ ಆಸ್ಟ್ರೇಲಿಯಾ.

ADVERTISEMENT

ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಮೇಲಿನ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಆಸ್ಟ್ರೇಲಿಯಾ ಈ ಕ್ರಮ ಕೈಗೊಂಡಿದೆ.

2025ರ ಡಿ.10ರಿಂದ ಈ ಕ್ರಮ ಜಾರಿಗೆ ಬಂದಿದೆ. ಆಸ್ಟ್ರೇಲಿಯಾದ ಈ ಕ್ರಮವನ್ನು ಶ್ಲಾಘಿಸಿರುವ ಅನೇಕ ದೇಶಗಳು ಅದೇ ಹಾದಿಯಲ್ಲಿ ಸಾಗಲು ಚಿಂತಿಸಿವೆ.

ಬ್ರಿಟನ್

ಆಸ್ಟ್ರೇಲಿಯಾದಂತೆಯೇ 16 ವರ್ಷ ಒಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧ ಹೇರುವುದು ಮತ್ತು ಎಐ ಚಾಟ್‌ಬಾಟ್‌ಗಳ ಮೇಲೆ ಸುರಕ್ಷತಾ ನಿರ್ಬಂಧಗಳನ್ನು ಹೇರುವ ಬಗ್ಗೆ ಚಿಂತಿಸಲಾಗಿದೆ ಎಂದು ಬ್ರಿಟನ್‌ನ ತಂತ್ರಜ್ಞಾನ ಸಚಿವ ಲಿಜ್‌ ಕೆಂಡಲ್ ಹೇಳಿದ್ದಾರೆ.

ಚೀನಾ

ಚೀನಾದ ಸೈಬರ್‌ಸ್ಪೇಸ್ ನಿಯಂತ್ರಕವು ಮೈನರ್ ಮೋಡ್ ಪ್ರೋಗ್ರಾಂ ಎಂದು ಕರೆಯಲ್ಪಡುವ ಪ್ರೋಗ್ರಾಂ ಜಾರಿಗೆ ತಂದಿದೆ. ಇದು ವಯಸ್ಸಿಗೆ ಅನುಗುಣವಾಗಿ ಪರದೆಯ ಸಮಯವನ್ನು ನಿರ್ಬಂಧಿಸಲು ಮತ್ತು ಆ್ಯಪ್‌ಗಳ ಮೇಲೆ ನಿರ್ಬಂಧವನ್ನು ವಿಧಿಸುತ್ತದೆ.

ಡೆನ್ಮಾರ್ಕ್‌

ಇಲ್ಲಿಯ ಪೋಷಕರು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಅವಕಾಶ ನೀಡಿದ್ದಾರೆ. ಹೀಗಾಗಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸುವುದಾಗಿ ಡೆನ್ಮಾರ್ಕ್ ನವೆಂಬರ್‌ನಲ್ಲಿ ಹೇಳಿದೆ.

ಫ್ರಾನ್ಸ್

ಆನ್‌ಲೈನ್‌ ಟೀಕೆಗಳಿಂದ ದೂರವಿಡಲು ಮತ್ತು ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸುವ ಮಸೂದೆಗೆ ಜನವರಿಯಲ್ಲಿ ಫ್ರಾನ್ಸ್‌ ಸರ್ಕಾರ ಅನುಮೋದನೆ ನೀಡಿದೆ.

ಜರ್ಮನಿ

ಜರ್ಮನಿಯಲ್ಲಿ 13 ರಿಂದ 16 ವರ್ಷ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಪೋಷಕರ ಸಮ್ಮುಖದಲ್ಲೇ ಬಳಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಆದರೆ ಮಕ್ಕಳ ಹಕ್ಕುಗಳ ಆಯೋಗ ಈ ನಿಯಂತ್ರಣ ಸಾಲದು ಎಂದು ಅಭಿಪ್ರಾಯಪಟ್ಟಿದೆ.

ಭಾರತ

ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆಗೆ ಸದ್ಯಕ್ಕೆ ಯಾವುದೇ ಬಿಗಿ ನಿಯಮಗಳಿಲ್ಲ. ಆದರೆ ಆಸ್ಟ್ರೇಲಿಯಾದಂತೆಯೇ ಶೀಘ್ರದಲ್ಲಿ 16 ವರ್ಷಕ್ಕಿಂತ ಕಡಿಮೆ ಇರುವವರಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧ ಹೇರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಇತರ ದೇಶಗಳು

ಇಟಲಿ, ಮಲೇಷ್ಯಾ, ಸ್ಪೇನ್‌, ಅಮೆರಿಕ, ನಾರ್ವೆ ದೇಶಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಾಮಾಜಿಕ ಮಾಧ್ಯಮ ಬಳಸದಂತೆ ತಡೆಯಲು ಲಾಗಿನ್‌ ವೇಳೆ ವಯಸ್ಸು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಹದಿಹರೆಯದ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಪ್ರವೇಶಿಸಿದಂತೆ ನಿರ್ಬಂಧಿಸಲಾಗಿದೆ.

ಟಿಕ್‌ಟಾಕ್‌, ಫೇಸ್‌ಬುಕ್‌, ಸ್ನಾಪ್‌ಚಾಟ್‌ಗಳು 13 ವರ್ಷ ದಾಟಿದವರು ಖಾತೆ ತೆರೆಯಬಹುದು ಎಂದಿದೆ. ಆದರೆ ಮಕ್ಕಳ ಹಕ್ಕುಗಳು ಪರ ಆಯೋಗಗಳು ನಿಯಂತ್ರಣಗಳು ಸಾಕಷ್ಟಿಲ್ಲ. ಹಲವು ಯುರೋಪಿಯನ್ ದೇಶಗಳಲ್ಲಿನ ಅಧಿಕೃತ ಮಾಹಿತಿ ಪ್ರಕಾರ 13 ವರ್ಷದೊಳಗಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾರೆಂದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.