ADVERTISEMENT

ಒಳನೋಟ: ಬೆಂಗಳೂರಿನ ನೆಲದಲ್ಲಿ ‘ಇ.ವಿ ನವೋದ್ಯಮ’

ಸಂತೋಷ ಜಿಗಳಿಕೊಪ್ಪ
Published 10 ಅಕ್ಟೋಬರ್ 2021, 2:39 IST
Last Updated 10 ಅಕ್ಟೋಬರ್ 2021, 2:39 IST
ಎಲೆಕ್ಟ್ರಿಕ್ ಬೈಕ್
ಎಲೆಕ್ಟ್ರಿಕ್ ಬೈಕ್    

ಬೆಂಗಳೂರು: ವಿಶ್ವದ ಅಗ್ರ ನಗರಗಳ ಪಟ್ಟಿಯಲ್ಲಿರುವ ಬೆಂಗಳೂರು, ಸಾರಿಗೆ ಕ್ಷೇತ್ರದಲ್ಲೂ ಹೆಗ್ಗಳಿಕೆ ಪಡೆದಿದೆ. ನಗರದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಆರಂಭಿಸಿದ್ದ ಓಲಾ ಕಂಪನಿ, ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಇದೀಗ ಎಲೆಕ್ಟ್ರಿಕ್ ವಾಹನ (ಇ.ವಿ) ಕ್ಷೇತ್ರದಲ್ಲೂ ಬೆಂಗಳೂರು ಮುಂಚೂಣಿಯಲ್ಲಿದ್ದು,ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಸ್ಥಳೀಯ ನವೋದ್ಯಮಗಳು (ಸ್ಟಾರ್ಟ್‌ಅಪ್‌) ಆರಂಭಗೊಂಡಿವೆ.

ಸಿಂಪಲ್‌ ಎನರ್ಜಿ, ಸ್ಟಾರ್ಯ ಮೊಬಿಲಿಟಿ, ರೆವೊಸ್, ಯುಲೂ, ಎಮ್‌ಪ್ಲಕ್ಸ್ ಮೋಟರ್ಸ್, ಒರಕ್ಸ್ ಎನರ್ಜಿಸ್, ಮಂಕಮೆ ಹಾಗೂ ಬೌನ್ಸ್ ಕಂಪನಿಗಳು ಮುಂಚೂಣಿಯಲ್ಲಿವೆ. ಅಂತರರಾಷ್ಟ್ರೀಯ ಕಂಪನಿ ‘ಓಲಾ’ ಜೊತೆ ಪೈಪೋಟಿಗೆ ಇಳಿದಿವೆ.

ಸುಹಾಸ್ ರಾಜ್‌ಕುಮಾರ್, ‘ಸಿಂಪಲ್ ಎನರ್ಜಿ’ ನವೋದ್ಯಮ ಆರಂಭಿಸಿ ‘ಒನ್’ ಹೆಸರಿನಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.ರವಿಕುಮಾರ್ ಜಗನ್ನಾಥ್ 2018ರಲ್ಲಿ ‘ಸ್ಟಾರ್ಯ ಮೊಬಿಲಿಟಿ’ ನವೋದ್ಯಮ ಆರಂಭಿಸಿದ್ದು, ಪೆಟ್ರೋಲ್ ಬೈಕ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸುವ ತಂತ್ರಜ್ಞಾನ ರೂಪಿಸಿದ್ದಾರೆ.ಇತ್ತೀಚೆಗೆ‘ಯೂಲು’ ಸ್ಕೂಟರ್‌ ಬಳಕೆ ಹೆಚ್ಚಿದೆ.

ADVERTISEMENT

ಅಮಿತ್ ಗುಪ್ತಾ ಅವರು ಆರ್‌.ಕೆ.ಮಿಶ್ರಾ ಹಾಗೂ ನವೀನ್ ದಚೂರಿ ಪಾಲುದಾರಿಕೆಯಲ್ಲಿ ‘ಆ್ಯಡ್‌ಟೆಕ್ ಯುನಿಕಾರ್ನ್ ಇನ್‌ಮೊಬಿ’ ಕಂಪನಿಯಡಿ ‘ಯೂಲು’ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ವರುಣ್ ಮಿತ್ತಲ್ ತಂಡವು ‘ಎಮ್‌ಪ್ಲಕ್ಸ್ ಮೋಟರ್ಸ್’ ಆರಂಭಿಸಿದ್ದಾರೆ.ರಂಜಿತಾ ರವಿ ಹಾಗೂ ಅವರ ಪತಿ ಪ್ರಜ್ವಲ್ ಸಬ್ನೀಸ್, ‘ಒರಕ್ಸ್ ಎನರ್ಜಿಸ್’ ನವೋದ್ಯಮ ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.