ಎ.ಐ ಚಿತ್ರ
ಚಿಂತಾಮಣಿ: ಪ್ರತಿ ವರ್ಷ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ.
ಆಹಾರ ಮತ್ತು ಕೃಷಿ ಕುರಿತ ಜಾಗತಿಕ ಜಾಗೃತಿ ಹೆಚ್ಚಿಸಲು 1945ರಲ್ಲಿ ಸ್ಥಾಪಿತವಾದ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ ಸ್ಮರಣಾರ್ಥ ವಿಶ್ವ ಆಹಾರ ದಿನ ಆಚರಿಸುವ ಪದ್ಧತಿ ಆರಂಭವಾಯಿತು.
ಆಹಾರದ ಗುಣಮಟ್ಟ ಹೆಚ್ಚಿಸಲು, ಪೌಷ್ಟಿಕತೆ ಎಲ್ಲರಿಗೂ ತಲುಪಿಸಲು ಹಾಗೂ ಸುಸ್ಥಿರ ಕೃಷಿ ಮೂಲಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಎಲ್ಲ ವಲಯಗಳ ಸಹಕಾರ ಅತ್ಯಗತ್ಯ ಎಂಬ ಶಕ್ತಿಯುತ ಸಂದೇಶವನ್ನು ನೀಡುತ್ತದೆ.
ಆಹಾರ ಮತ್ತು ಕೃಷಿ ಸಂಸ್ಥೆ ವರದಿ ಪ್ರಕಾರ ಉತ್ಪಾದನೆಯಾದ ಆಹಾರದಲ್ಲಿ ಮೂರನೇ ಒಂದು ಭಾಗ ವ್ಯರ್ಥವಾಗುತ್ತಿದೆ ಎಂದು ತಿಳಿಸಿದೆ. ಇದನ್ನು ಬದಲಾಯಿಸಲು ಸರ್ಕಾರ, ರೈತರು, ವಿಜ್ಞಾನಿಗಳು, ನಾಗರಿಕ ಸಮಾಜ ಮತ್ತು ಗ್ರಾಹಕರು ಕೈ ಕಟ್ಟಿ ನಿಲ್ಲದೆ, ಕೈ ಕೈ ಹಿಡಿದು ಕೆಲಸ ಮಾಡಬೇಕಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಸೌಮ್ಯ ಹಿರೇಗೌಡರ್ ಹೇಳುತ್ತಾರೆ.
ರೈತ ಬೆಳೆ ಬೆಳೆಸಿದಾಗ ಗ್ರಾಹಕರು ಸ್ಥಳೀಯವಾಗಿ ಖರೀದಿಸಬೇಕು. ಸರ್ಕಾರ ಬೆಂಬಲ ನೀಡಬೇಕು. ಸಂಶೋಧಕರು ಉತ್ತಮ ತಂತ್ರಜ್ಞಾನ ಒದಗಿಸಬೇಕು. ವಿಶ್ವ ಆಹಾರ ದಿನದಂದು ಆಹಾರ ಹಕ್ಕು, ಆಹಾರ ಜವಾಬ್ದಾರಿ, ಆಹಾರ ಸಹಕಾರ ಬಗ್ಗೆ ಸರಳ ಹಾಗೂ ಶಾಶ್ವತ ಸಂದೇಶ ನೀಡುತ್ತದೆ ಎಂದು ಸೌಮ್ಯ ಹಿರೇಗೌಡರ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.