ADVERTISEMENT

ಕ್ರಿಸ್‌ಮಸ್‌ ವಿಶೇಷ ರೆಸಿಪಿ | ಹಬ್ಬಕ್ಕೆ ಶಂಕರಪೋಳಿ ಮಾಡಿ ಸಿಹಿ ಹಂಚಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 9:31 IST
Last Updated 24 ಡಿಸೆಂಬರ್ 2025, 9:31 IST
   

ಕ್ರಿಸ್‌ಮಸ್‌ ಹಬ್ಬ ಬಂತು ಅಂದರೆ ಸಾಕು ಸಿಹಿ ತಿನಿಸುಗಳ ಭರಾಟೆ ಜೋರಾಗಿರುತ್ತದೆ. ಈ ಹಬ್ಬದಲ್ಲಿ ಕೇಕ್ ವಿಶೇಷ ಎನಿಸಿದರೂ, ಅನೇಕ ಸಿಹಿ ಪದಾರ್ಥಗಳು ಗಮನಸೆಳೆಯುತ್ತವೆ. ಅದರಲ್ಲಿ ಒಂದು ಶಂಕರಪೋಳಿ. ಇದನ್ನು ಬಹುಬೇಗನೆ ಸುಲಭವಾಗಿ ಮನೆಯಲ್ಲೇ ತಯಾರಿಸುವ ಬಗ್ಗೆ ಇಲ್ಲಿದೆ ಮಾಹಿತಿ

ಶಂಕರಪೋಳಿ ಮಾಡಲು ಬೇಕಾಗುವ ಸಾಮಗ್ರಿಗಳು

ಸಕ್ಕರೆ– 1 ಕಪ್

ADVERTISEMENT

ಹಾಲು– 1 ಕಪ್

ಮೈದಾ ಹಿಟ್ಟು–1ರಿಂದ2 ಕಪ್

ಉಪ್ಪು– ಚಿಟಿಕೆಯಷ್ಟು

ಅಡುಗೆ ಎಣ್ಣೆ

ತುಪ್ಪ– ಅರ್ಧ ಕಪ್

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ 1 ಕಪ್ ಹಾಲು, ಸಕ್ಕರೆ ಸೇರಿಸಿ 5ರಿಂದ10 ನಿಮಿಷ ಕಾಯಿಸಿಕೊಳ್ಳಿ. ಬಳಿಕ ಅದಕ್ಕೆ ಅರ್ಧ ಕಪ್ ಎಣ್ಣೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿಟಿಕೆ ಉಪ್ಪು ಹಾಗೂ ಕಾಯಿಸಿಕೊಂಡ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿ ಹಿಟ್ಟನ್ನು ಚಪಾತಿ ಹದಕ್ಕೆ ಕಲಸಿಕೊಳ್ಳಿ.

ಕಲಸಿಕೊಂಡ ಹಿಟ್ಟನ್ನು ಚಪಾತಿ ಗಾತ್ರಕ್ಕೆ ಅಗತ್ಯಕ್ಕೆ ಲಟ್ಟಿಸಿಕೊಳ್ಳಿ. (ದಪ್ಪವೂ ಆಗಬಾರದು ತೆಳುವಾಗಿಯೂ ಇರಬಾರದು)

ನಂತರ ಲಟ್ಟಿಸಿಕೊಂಡ ಹಿಟ್ಟನ್ನು ಶಂಕರಪೋಳಿ ಆಕಾರದಲ್ಲಿ ಚಾಕುವಿನ ಸಹಾಯದಿಂದ ಕತ್ತರಿಸಿಕೊಳ್ಳಿ. ನಂತರ ಕತ್ತರಿಸಿಕೊಂಡ ಹಿಟ್ಟನ್ನು ಎಣ್ಣೆಗೆ ಬಿಡಿ.

ಸವಿಯಲು ಸಿದ್ಧ ಶಂಕರಪೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.