
ನುಗ್ಗೆಕಾಯಿ
ಉತ್ತಮ ಆರೋಗ್ಯಕ್ಕೆ ನುಗ್ಗೆಕಾಯಿ ಹಾಗೂ ಅದರ ಸೊಪ್ಪು ಸಹಕಾರಿ. ಪ್ರತಿ ಮನೆಯಲ್ಲೂ ನುಗ್ಗೆಕಾಯಿ ಸಾರು, ಪ್ರೈ, ಪಲ್ಯ ಮತ್ತು ಚಟ್ನಿಯನ್ನು ಮಾಡುತ್ತಾರೆ. ಆದರೆ ನುಗ್ಗೆಕಾಯಿಂದ ಉಪ್ಪಿನಕಾಯಿಯನ್ನು ಹೇಗೆ ಮಾಡುವುದು ಎಂದು ತಿಳಿಯೋಣ.
ನುಗ್ಗೆಕಾಯಿ
ಬ್ಯಾಡಗಿ ಮೆಣಸಿನಕಾಯಿ
ಜೀರಿಗೆ
ಅರಿಸಿನ
ಉಪ್ಪು
ಹುಣಸೆಹಣ್ಣು
ಮೆಂತ್ಯ
ಬೆಲ್ಲ
ಸಾಸಿವೆ ಅಡುಗೆ ಎಣ್ಣೆ.
ಮೊದಲು ನುಗ್ಗೆಕಾಯಿಯನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು. ನಂತರ ಹುರಿದ ಬ್ಯಾಡಗಿ ಮೆಣಸಿನಕಾಯಿ, ಜೀರಿಗೆ, ಮೆಂತ್ಯ ಅರಿಸಿನ ಹಾಗೂ ಸ್ವಲ್ಪ ನೀರನ್ನು ಮಿಕ್ಸಿ ಜಾರಿಗೆ ಹಾಕಿ ಮಿಶ್ರಣ ಮಾಡಬೇಕು. ಬಳಿಕ ಒಂದು ಬಾಣಲೆಗೆ ಎಣ್ಣೆ ಹಾಕಿ ಬೇಯಿಸಿದ ನುಗ್ಗೆಕಾಯಿ, ಉಪ್ಪು, ಹುಣಸೆ ಹಣ್ಣಿನ ರಸ ಮತ್ತು ಬೆಲ್ಲವನ್ನು ಸೇರಿಸಬೇಕು. ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಕೊನೆಯಲ್ಲಿ ಸಾಸಿವೆ ಒಗ್ಗರಣೆ ಕೊಟ್ಟರೆ ನುಗ್ಗೆಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.