
ಕ್ಯಾರೆಟ್‌ನಲ್ಲಿ ಪೋಷಕಾಂಶ ಹೇರಳವಾಗಿರುವ ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಕೆಲವು ಇದನ್ನು ಹಸಿ ತಿನ್ನುತ್ತಾರೆ. ಹಸಿ ತಿನ್ನಲು ಆಗದೇ ಇದ್ದರೆ, ಇದರಿಂದ ಹಲ್ವಾ ಅಥವಾ ಇತರೆ ತಿನಿಸು ಮಾಡಿ ಸವಿಯಬಹುದು. ಹಾಗಾದರೆ ಸುಲಭ ವಿಧಾನದಲ್ಲಿ ಕ್ಯಾರೆಟ್ ಹಲ್ವಾ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ.
ಕ್ಯಾರೆಟ್ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು
4–5 ಕ್ಯಾರೆಟ್
ಒಣ ಹಣ್ಣುಗಳು
ಕಾಲು ಕೆಜಿ ಸಕ್ಕರೆ
ಅರ್ಧ ಲೀ, ಹಾಲು
1–2 ಚಮಚ ತುಪ್ಪ
ಮಾಡುವ ವಿಧಾನ
ಮೊದಲು ಹಾಲು ಹಾಗೂ ಸಕ್ಕರೆಯನ್ನು ಕುದಿಸಿಕೊಳ್ಳಿ. ಕ್ಯಾರೆಟ್ಅನ್ನು ತೊಳೆದು, ತುರಿದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಒಣ ಹಣ್ಣುಗಳನ್ನು ಹುರಿದುಕೊಂಡು ಇಟ್ಟುಕೊಳ್ಳಿ.
ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಕುದಿಸಿದ ಹಾಲನ್ನು ಹಾಕಿ 5–10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಒಣ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ.
ಸವಿಯಲು ಸಿದ್ದ ಕ್ಯಾರೆಟ್ ಹಲ್ವಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.