ADVERTISEMENT

ಸುಲಭ ವಿಧಾನದಲ್ಲಿ ಹೀಗೆ ಮಾಡಿ ಸೌತೆಕಾಯಿ ಚಟ್ನಿ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2026, 12:51 IST
Last Updated 21 ಜನವರಿ 2026, 12:51 IST
   

ಈರುಳ್ಳಿ, ತೆಂಗಿನಕಾಯಿ, ಟೊಮೊಟೊ ಸೇರಿ ಅನೇಕ ರೀತಿಯ ಚಟ್ನಿಗಳನ್ನು ಮಾಡುತ್ತೇವೆ. ಅದೇ ರೀತಿ ಸುಲಭವಾಗಿ ಸೌತೆಕಾಯಿಯಿಂದಲೂ ಚಟ್ನಿ ಮಾಡಬಹುದು. ಸೌತೆಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಸೌತೆಕಾಯಿಯನ್ನು ಹಾಗೆ ಸೇವಿಸಲು ಆಗದೆ ಇದ್ದರೆ ಚಟ್ನಿ ಮಾಡಿ ಸೇವಿಸಬಹುದು. ಸೌತೆಕಾಯಿಯಿಂದ ಮಾಡಬಹುದಾದ ಚಟ್ನಿ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.

ಸೌತೆಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ– 1ರಿಂದ2
ಜೀರಿಗೆ– ಕಾಲು ಚಮಚ
ಹಸಿರು ಮೆಣಸಿನಕಾಯಿ– 1 ರಿಂದ 2
ಕರಿಬೇವು
ಹುರಿಗಡಲೆ– 1 ಚಮಚ
ಕೊತ್ತಂಬರಿ ಸೊಪ್ಪು– ಅರ್ಧ ಕಪ್
ತೆಂಗಿನಕಾಯಿ–
ಉಪ್ಪು– ರುಚಿಗೆ ತಕ್ಕಷ್ಟು
ಹುಣಿಸೆ ರಸ
ಅಡುಗೆ ಎಣ್ಣೆ
ಬೆಳ್ಳುಳ್ಳಿ– 3 ಎಸಳು
ಒಗ್ಗರಣೆ(ಸಾಸಿವೆ,ಒಣ ಮೆಣಸಿನಕಾಯಿ, ಕರಿಬೇವು)

ಸೌತೆಕಾಯಿ ಚಟ್ನಿ ಮಾಡುವ ವಿಧಾನ
ಮೊದಲು ಬಾಣಲೆಗೆ 1 ಚಮಚ ಅಡುಗೆ ಎಣ್ಣೆ ಹಾಕಿ, ಕಾದ ಬಳಿಕ ಅದಕ್ಕೆ ಕತ್ತರಿಸಿಕೊಂಡ ಹಸಿರು ಮೆಣಸಿನಕಾಯಿ, ಜೀರಿಗೆ, ಹುರಿಗಡಲೆ, ಕತ್ತರಿಸಿಕೊಂಡ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪ, ಒಂದು ಚಮಚ ಹುಣಿಸೆ ರಸ ಸೇರಿಸಿ ಒಂದೆರಡು ನಿಮಿಷ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ತುರಿದುಕೊಂಡ ಸೌತೆಕಾಯಿ ಸೇರಿಸಿ ಚಟ್ನಿ ಹದಕ್ಕೆ ರುಬ್ಬಿಕೊಳ್ಳಿ.

ನಂತರ ಬಾಣಲೆಯಲ್ಲಿ ಒಂದು ಚಮಚ ಅಡುಗೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ತಯಾರಿಸಿಕೊಳ್ಳಿ.

ಬಳಿಕ ರುಬ್ಬಿಕೊಂಡ ಸೌತೆಕಾಯಿ ಚಟ್ನಿಗೆ ಒಗ್ಗರಣೆ ಹಾಕಿ ಮಿಶ್ರಣ ಮಾಡಿಕೊಳ್ಳಿ. 
ರೊಟ್ಟಿ, ಅನ್ನದ ಜೊತೆ, ಸವಿಯಲು ಸಿದ್ಧ ಸೌತೆಕಾಯಿ ಚಟ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT