ADVERTISEMENT

ರೆಸಿಪಿ | ಸಂಕ್ರಾಂತಿಗೆ ರುಚಿಯಾದ ಎಳ್ಳು–ಬೆಲ್ಲ: ಮನೆಯಲ್ಲಿ ಹೀಗೆ ತಯಾರಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2026, 11:40 IST
Last Updated 11 ಜನವರಿ 2026, 11:40 IST
<div class="paragraphs"><p>ಎಳ್ಳು–ಬೆಲ್ಲ</p></div>

ಎಳ್ಳು–ಬೆಲ್ಲ

   

ಚಿತ್ರ ಕೃಪೆ: ಗೆಟ್ಟಿ

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ವಿಶೇಷವೆಂದರೆ ಎಳ್ಳು–ಬೆಲ್ಲ. ‘ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂಬ ಪ್ರಸಿದ್ಧ ಸಾಲುಗಳಿವೆ. ಸಂಕ್ರಾಂತಿಯಂದು ಮನೆಯಲ್ಲಿಯೇ ಸುಲಭವಾಗಿ ಎಳ್ಳು–ಬೆಲ್ಲವನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ. 

ADVERTISEMENT

ಅಂಗಡಿಗಳಲ್ಲಿ ಹತ್ತಾರು ಬಗೆಯ ಸಿದ್ಧ ಎಳ್ಳಿನ ಪೊಟ್ಟಣಗಳು ಸಿಗುತ್ತವೆ. ಆದರೆ ಮನೆಯಲ್ಲಿಯೇ ತಯಾರಿಸುವುದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸಂಪ್ರದಾಯವನ್ನು ಪಾಲಿಸಿದಂತೆಯೂ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಎಳ್ಳು–ಬೆಲ್ಲ ತಯಾರಿಸುವುದು ಉತ್ತಮವಾಗಿದೆ.

ಬೇಕಾದ ಪದಾರ್ಥಗಳು

  • ಕಡಲೆ ಬೀಜ

  • ಹುರಿಗಡಲೆ

  • ಕಪ್ಪು ಎಳ್ಳು

  • ಕೊಬ್ಬರಿ

  • ಬೆಲ್ಲ

  • ಜೀರಿಗೆ ಮಿಠಾಯಿ

ಮಾಡುವ ವಿಧಾನ

ಮೊದಲಿಗೆ ಕಡಲೆ ಕಾಯಿಯ ಬೀಜಗಳನ್ನು ಒಂದು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದುಕೊಂಡು, ಬೀಜಗಳನ್ನು ಎರಡು ಭಾಗವಾಗಿಸಿ, ಸಿಪ್ಪೆಯನ್ನು ಬೇರ್ಪಡಿಸಿಟ್ಟುಕೊಳ್ಳಿ. ಬಳಿಕ ಬಾಣಲೆ ಹುರಿಗಡಲೆಯನ್ನು ಕಪ್ಪಾಗುವ ವರೆಗೂ ಹುರಿದು ಸಿಪ್ಪೆ ತೆಗೆಯಿರಿ. ಎಳ್ಳನ್ನು ಕಡಿಮೆ ಉರಿಯಲ್ಲಿ ಹುರಿದು ತಣ್ಣಗಾಗಲು ಬಿಡಿ.

ನಂತರ ಒಂದು ದೊಡ್ಡದಾದ ಬೇಸನ್‌ ಅಥವಾ ಪಾತ್ರೆ ತೆಗೆದುಕೊಂಡು ಅದಕ್ಕೆ ಸಿದ್ದ ಮಾಡಿ ಇಟ್ಟುಕೊಂಡ ಹುರಿಗಡಲೆ, ಕಡಲೆ ಬೀಜ, ಎಳ್ಳು, ಸಣ್ಣದಾಗಿ ಕತ್ತರಿಸಿದ ಕೊಬ್ಬರಿ ಹಾಗೂ ಬೆಲ್ಲದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯ ಇದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗೆ ಬಗೆಯ ಜೀರಿಗೆ ಮಿಠಾಯಿಗಳನ್ನು ಸೇರಿಸಬಹುದು. ಹೀಗೆ ಸುಲಭವಾಗಿ ಎಳ್ಳು–ಬೆಲ್ಲವನ್ನು ಮನೆಯಲ್ಲಿ ತಯಾರು ಮಾಡಬಹುದು.  

ಎಳ್ಳು–ಬೆಲ್ಲ ಸೇವನೆಯ ಉಪಯೋಗ: 

ಚಳಿಗಾಲದಲ್ಲಿ ದೇಹಕ್ಕೆ ಬಿಸಿ ಬೇಕಾಗುತ್ತದೆ. ಎಳ್ಳು ಮತ್ತು ಬೆಲ್ಲದ ಸೇವನೆ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿ ವಿಟಮಿನ್ ಇ, ತಾಮ್ರ, ಕ್ಯಾಲ್ಸಿಯಂ, ಸತು ಹಾಗೂ ಕಬ್ಬಿಣದಂತಹ ಖನಿಜಗಳಿವೆ. ಇವು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಲ್ಲದೇ ಚಳಿಗಾಲಕ್ಕೆ ಹೇಳಿ ಮಾಡಿಸಿದ ತಿನಿಸುಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.