

ಹೆಸರುಕಾಳು ಅನ್ನು ಹಾಗೆ ಸೇವಿಸಲು ಆಗದಿದ್ದರೆ, ಇದರ ಕೊಸಂಬರಿ ಅನ್ನು ತಯಾರಿಸಿ ಸೇವಿಸಬಹುದು. ಹೆಸರುಕಾಳು ಕೊಸಂಬರಿಯು ಉತ್ತಮ ಪೋಷಾಕಾಂಶ ಹೊಂದಿದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಉಪಯೋಗವಿದೆ. ಬಹುಬೇಗನೆ ಆಗುವ ಹೆಸರುಕಾಳು ಕೋಸಂಬರಿ ತಯಾರಿಸುವ ಬಗ್ಗೆ ಇಲ್ಲಿದೆ ಮಾಹಿತಿ.
ಹೆಸರುಕಾಳು ಕೋಸಂಬರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಮೊಳಕೆ ಕಟ್ಟಿದ ಹೆಸರುಕಾಳು– 1/2 ಕಪ್
ತುರಿದ ಕ್ಯಾರೆಟ್– ಅರ್ಧ ಕಪ್
ದಾಳಿಂಬೆ ಕಾಳು– 1/4 ಕಪ್
ಉಪ್ಪು– ರುಚಿಗೆ ತಕ್ಕಷ್ಟು
ನಿಂಬೆ ರಸ– ಅರ್ಧ ಚಮಚ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೊಳಕೆ ಕಟ್ಟಿದ ಹೆಸರುಕಾಳು, ಕ್ಯಾರೇಟ್ ತುರಿ, ದಾಳಿಂಬೆ ಕಾಳು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಸವಿಯಲು ಸಿದ್ದ ಹೆಸರುಕಾಳು ಕೋಸಂಬರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.