
ಚಿಕನ್ ಘೀ ರೋಸ್ಟ್
ವಾರಾಂತ್ಯ ಬಂತೆಂದರೆ ಸಾಕು ನಾನ್ ವೆಜ್ ಪ್ರಿಯರು ಮನೆಯಲ್ಲಿ ಹಲವು ಬಗೆಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಚಿಕನ್, ಮಟನ್, ಮತ್ತು ಮೀನು ಸೇರಿದಂತೆ ವಿವಿಧ ರೀತಿಯ ಗ್ರೇವಿ, ಬಿರಿಯಾನಿ, ಕಬಾಬ್‌ಗಳು, ಫ್ರೈಗಳು ಹಾಗೂ ಸೂಪ್‌ಗಳನ್ನು ಮನೆಯಲ್ಲಿ ತಯಾರಿಸುತ್ತಾರೆ. ಆದರೆ ಮಂಗಳೂರು–ಕುಂದಾಪುರ ವಿಶೇಷ ಖಾದ್ಯವಾಗಿರುವ ಚಿಕನ್ ಘೀ ರೋಸ್ಟ್ ಅನ್ನು ಹೋಟೆಲ್ ಶೈಲಿಯಲ್ಲಿ ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ.
ಚಿಕನ್ ಘೀ ರೋಸ್ಟ್
ಚಿಕನ್ ಘೀ ರೋಸ್ಟ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು
ಚಿಕನ್, ಮೊಸರು, ಉಪ್ಪು, ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹುಣಸೆ ರಸ, ತುಪ್ಪ, ಕರಿಬೇವಿನ ಎಲೆಗಳು.
ಮಾಡುವ ವಿಧಾನ
1 ಕೆಜಿ ಚಿಕನ್‌ಗೆ 100 ಗ್ರಾಂ ಮೊಸರು, ಶುಂಠಿಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕಷ್ಟು ಉಪ್ಪು ಹಾಕಿ ಕನಿಷ್ಠ 1 ಗಂಟೆ ಮ್ಯಾರಿನೇಟ್ ಮಾಡಿ. ನಂತರ ಒಂದ ತಟ್ಟೆಯಲ್ಲಿ ಚಿಕನ್ ಘೀ ರೋಸ್ಟ್ ಪುಡಿ ಹಾಕಿ ಅದಕ್ಕೆ ಕೊಂಚ ನೀರು ಹಾಕಿ ಮಿಶ್ರಣ ಮಾಡಿ.
ಬಳಿಕ ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಮಿಶ್ರಣ ಮಾಡಿಟ್ಟುಕೊಂಡ ಚಿಕನ್ ಘೀ ರೋಸ್ಟ್ ಮಸಾಲವನ್ನು ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅದಕ್ಕೆ ಮ್ಯಾರಿನೇಟ್ ಮಾಡಿಕೊಂಡ ಚಿಕನ್ ಹಾಗೂ ಕರಿಬೇವಿನ ಎಲೆ ಹಾಕಿ ಮಿಶ್ರಣ ಮಾಡಿ. ನಂತರ ಹುಣಸೆ ರಸ ಹಾಕಿ ಚಿಕನ್ ಬೇಯಿಸಿ. ಇದಾದ ಬಳಿಕ ಅದರ ಮೇಲೆ ನಿಂಬೆ ರಸ ಹಾಗೂ ತುಪ್ಪವನ್ನು ಹಾಕಿ 5 ನಿಮಿಷ ಬಿಡಿ. ಈಗ ಚಿಕನ್ ಘೀ ರೋಸ್ಟ್ ಅನ್ನ, ರೊಟ್ಟಿ, ಚಪಾತಿ ಜೊತೆ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.