
ಸಸ್ಯಹಾರಿಗಳು ಸೇರಿದಂತೆ ಅನೇಕರು ಮೊಟ್ಟೆಯನ್ನು ಸೇವಿಸುತ್ತಾರೆ. ಒಂದೇ ರೀತಿಯ ಮೊಟ್ಟೆ ಸಾಂಬರ್ ತಿಂದು ಬೇಜಾರಾಗಿದ್ದರೆ, ಹೊಟೆಲ್ ಶೈಲಿಯ ಎಗ್ ಮಸಾಲ ಪ್ರಯತ್ನಿಸಿ. ಬಹುಬೇಗ ಸಿದ್ಧಪಡಿಸಬಹುದಾದ ಮೊಟ್ಟೆ ಮಸಾಲವನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ
ಎಗ್ ಮಸಾಲ ಮಾಡಲು ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ– 4ರಿಂದ5
ಹಸಿರು ಮೆಣಸಿನಕಾಯಿ–4ರಿಂದ5
ಕೊತ್ತಂಬರಿ ಸೊಪ್ಪು
ಪುದೀನಾ ಸೊಪ್ಪು
ಶುಂಠಿ– ಬೆಳ್ಳುಳ್ಳಿ– ಅಗತ್ಯಕ್ಕೆ ತಕ್ಕಷ್ಟು
ಚಕ್ಕೆ, ಲವಂಗ – ಅಗತ್ಯಕ್ಕೆ ತಕ್ಕಷ್ಟು
ಈರುಳ್ಳಿ– 1ರಿಂದ2
ಟೊಮೆಟೊ– 1
ಹುಳಿ– ಅಗತ್ಯಕ್ಕೆ ತಕ್ಕಷ್ಟು
ತೆಂಗಿನಕಾಯಿ ತುರಿ–ಅಗತ್ಯಕ್ಕೆ ತಕ್ಕಷ್ಟು
ಧನಿಯಾ– 1 ಚಮಚ
ಜೀರಿಗೆ–ಅರ್ಧ ಚಮಚ
ಅರಿಶಿಣ ಪುಡಿ– ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ: ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡ ಸ್ವಲ್ಪ ಈರುಳ್ಳಿ, ಜೀರಿಗೆ, ಧನಿಯಾ, ಹಸಿರು ಮೆಣಸಿನಕಾಯಿ, ತೆಂಗಿನಕಾಯಿ ತುರಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಶುಂಠಿ– ಬೆಳ್ಳುಳ್ಳಿ, ಚಿಟಿಕೆಯಷ್ಟು ಚಕ್ಕೆ,ಲವಂಗ ಸೇರಿಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಹದಕ್ಕೆ ರುಬ್ಬಿಕೊಳ್ಳಿ.
ನಂತರ ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಬಳಿಕ ಅದಕ್ಕೆ, ಕತ್ತರಿಸಿಕೊಂಡ ಈರುಳ್ಳಿ,ಟೊಮೆಟೊ, ಚಕ್ಕೆ, ಪಲಾವ್ ಸೊಪ್ಪು, ಹಾಕಿ ಫೈ ಮಾಡಿಕೊಳ್ಳಿ. ನಂತರ ಅದಕ್ಕೆ ರುಬ್ಬಿಕೊಂಡ ಮಸಾಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಹಾಗೂ ಹುಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಬೇಯಿಸಿದ ಮೊಟ್ಟೆ ಕೊತ್ತಂಬರಿ ಸೊಪ್ಪು ಹಾಕಿ ಒಂದೆರಡು ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರೊಟ್ಟಿ,ಚಪಾತಿ, ದೋಸೆ, ಅನ್ನದ ಜತೆ ಸವಿಯಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.