ADVERTISEMENT

ಲಖನೌ ಆಹಾರಕ್ಕೆ ಜಾಗತಿಕ ಮನ್ನಣೆ: ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ ಎಂದ UNESCO

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2025, 12:44 IST
Last Updated 5 ನವೆಂಬರ್ 2025, 12:44 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಉಜ್ಬೇಕಿಸ್ತಾನ್‌ನಲ್ಲಿ ನಡೆದ ಯುನೆಸ್ಕೋ ಸಾಮಾನ್ಯ ಸಮ್ಮೇಳನದ 43ನೇ ಅಧಿವೇಶನದಲ್ಲಿ ಲಖನೌನ ಶ್ರೀಮಂತ ಪಾಕಶಾಲೆಯ ಪರಂಪರೆ ಹಾಗೂ ಸಂಪ್ರದಾಯಿಕ ಅಡುಗೆ ಪದ್ದತಿಗೆ ಜಾಗತಿಕ ಮನ್ನಣೆ ದೊರೆತಿದೆ.

ಲಖನೌ ನಗರ ಯುನೆಸ್ಕೋದ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ (UCCN) ಅಡಿ 'ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ' ಎಂಬ ಪ್ರತಿಷ್ಠಿತ ಬಿರುದನ್ನು ಔಪಚಾರಿಕವಾಗಿ ತನ್ನದಾಗಿಸಿಕೊಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮಾತ್ರವಲ್ಲ, ಈ ಬಿರುದು ಪಡೆದ ಎರಡನೇ ನಗರವಾಗಿದೆ. ಇದಕ್ಕೂ ಮೊದಲು ಹೈದರಾಬಾದ್ ಈ ಬಿರುದು ಪಡೆದಿತ್ತು. 

ADVERTISEMENT

ಗಲೋಟಿ ಕಬಾಬ್‌ (Galouti Kebabs) : 

ಲಖನೌದ ರಾಜಮನೆತನದ ಪ್ರಮುಖ ಖಾದ್ಯವಾಗಿದೆ. ಗಲೋಟಿ ಕಬಾಬ್‌ ಮೃದುವಾಗಿದ್ದು, ಬಾಯಿಯಲ್ಲಿಟ್ಟ ತಕ್ಷಣ ಕರಗುತ್ತದೆ. ಸ್ಥಳೀಯ ಕುರಿ ಮಾಂಸ ಬಳಸಿ ಗಲೋಟಿ ಕಬಾಬ್‌ ತಯಾರಿಸಲಾಗುತ್ತದೆ. ಇದರಲ್ಲಿ ಸಸ್ಯಾಹಾರಿ ಖಾದ್ಯಗಳಾದ ರಾಜ್ಮಾ, ಅಣಬೆ ಅಥವಾ ಸಿಹಿ ಜೋಳದಿಂದಲೂ ಕೂಡ ಗಲೋಟಿ ಕಬಾಬ್‌ ಅನ್ನು ತಯಾರಿಸಲಾಗುತ್ತದೆ. ಬ್ರೇಡ್‌ ಜೊತೆ ಗಲೋಟಿ ಕಬಾಬ್‌ ಸೇವನೆ ಹೆಚ್ಚು ಪ್ರಸಿದ್ದಿ ಪಡೆದಿದೆ.

ಎಐ ಚಿತ್ರ

ನಿಹಾರಿ (Nihari):

ನಿಹಾರಿ ಅವಧ್‌ನ ರಾಜಮನೆತನದ ಪ್ರಸಿದ್ಧ ಖಾದ್ಯವಾಗಿದೆ. ಗೋಮಾಂಸ, ಕುರಿ, ಮೇಕೆ ಹಾಗೂ ಕೋಳಿ ಮಾಂಸಗಳಿಂದ ತಯಾರಿಸಲಾಗುತ್ತದೆ. ಮಾಂಸ ಹಾಗೂ ಕರಿಮೆಣಸು ಸೇರಿಸಿ ಹದವಾಗಿ ಮತ್ತು ನಿಧಾನವಾಗಿ ಬೇಯಿಸಿ ನಿಹಾರಿಯನ್ನು ತಯಾರಿಸಲಾಗುತ್ತದೆ. ನಿಹಾರಿಯನ್ನು ಕುಲ್ಚಾ ಅಥವಾ ಖಮಿರಿ ರೊಟ್ಟಿಯೊಂದಿಗೆ ಸೇವಿಸಲಾಗುತ್ತದೆ. 

ಎಐ ಚಿತ್ರ

ಲಖನೌ ಬಿರಿಯಾನಿ (Lucknow Biryani) :

ಲಖನೌ ಬಿರಿಯಾನಿ ನವಾಬರ ಕೊಡುಗೆಯಾಗಿದೆ. ಈ ಬಿರಿಯಾನಿ ತನ್ನ ಸುವಾಸನೆಯಿಂದಲೇ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಮಾಂಸವನ್ನು ಬೇಯಿಸಿದ ನಂತರ ಹಂತ ಹಂತವಾಗಿ ಅನ್ನದೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಇದು ರುಚಿಕರವಾದ ಬಿರಿಯಾನಿಗಳಲ್ಲಿ ಒಂದಾಗಿದೆ. 

ಎಐ ಚಿತ್ರ

ಸೀಖ್ ಕಬಾಬ್ (Seekh Kebabs) :

ಸೀಖ್ ಕಬಾಬ್ ಸಾಂಪ್ರದಾಯಿಕ ಮತ್ತು ಅತ್ಯಂತ ಜನಪ್ರಿಯ ಖಾದ್ಯವಾಗಿದೆ. ಇದನ್ನು ನುಣ್ಣಗೆ ರುಬ್ಬಿದ ಅಥವಾ ಕೊಚ್ಚಿದ ಮಾಂಸದಿಂದ ತಯಾರಿಸಲಾಗುತ್ತದೆ. ಪರಿಮಳಯುಕ್ತ ಮಸಾಲೆಗಳು ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದಲೇ ಇದು ಹೆಸರುವಾಸಿಯಾಗಿದೆ. 

ಎಐ ಚಿತ್ರ

ನಿಧಾನವಾಗಿ ಬೇಯಿಸಿದ ಕುರ್ಮಾ (Slow-cooked Kormas) :

ಇದು ಲಖನೌನ ಆಹಾರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಬಾಯಲ್ಲಿ ಕರಗುವ ಖಾದ್ಯ ಎಂದೇ ಪ್ರಸಿದ್ದಿ ಪಡೆದಿರುವ ಕುರ್ಮಾವನ್ನು, ಮಾಂಸ ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಮಸಾಲೆ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. 

ಎಐ ಚಿತ್ರ

ಸ್ಟ್ರೀಟ್‌ ಚಾಟ್ (Street chat):

ಲಖನೌದ ಸ್ಟ್ರೀಟ್‌ ಚಾಟ್ ಸೇವಿಸುವುದು ಉತ್ತಮ ಅನುಭವ ನೀಡುತ್ತದೆ. ದಹಿ ಬಲ್ಲಾ, ಆಲೂ ಟಿಕ್ಕಿ, ಗೋಲ್ ಗುಪ್ಪ ಮತ್ತು ಇತರ ಖಾದ್ಯಗಳು ಚಾಟ್ ಸಂಸ್ಕೃತಿಯ ಪ್ರತೀಕವಾಗಿವೆ.  

ಎಐ ಚಿತ್ರ

ಮಖನ್ ಮಲೈ (Makhan Malai) :

ಮಖನ್ ಮಲೈ ಖಾದ್ಯವು ಲಖನೌನ ಚಳಿಗಾಲದ ಸಮಯದಲ್ಲಿ ಹಾಲಿನ ಕೆನೆಯಿಂದ ತಯಾರಿಸಲಾಗುವ ಒಂದು ನೊರೆಯುಳ್ಳ ಸಿಹಿ ಪದಾರ್ಥವಾಗಿದೆ. ಇದನ್ನು ‘ಮಲೈ ಮಖಾನ್’ ಅಥವಾ ‘ನಿಮಿಶ್’ ಎಂದೂ ಕರೆಯುತ್ತಾರೆ.

ಎಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.