ಸಂಜೆ ಕಾಫಿ, ಅಥವಾ ಸ್ನೇಹಿತರ ಜತೆ ಒಟ್ಟುಗೂಡಿದಾಗ ಅನೇಕರು ಬೇಕರಿ ಆಲೂಗಡ್ಡೆ ಚಿಪ್ಸ್ ಸವಿಯಲು ಇಚ್ಚಿಸುತ್ತಾರೆ. ಈ ಚಿಪ್ಸ್ ಅನ್ನು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳವ ಕುರಿತು ಇಲ್ಲಿದೆ ಮಾಹಿತಿ.
ಆಲೂಗಡ್ಡೆ ಚಿಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
2–3 ಆಲೂಗಡ್ಡೆ
1–2 ಚಮಚ ಖಾರದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಆಲೂಗಡ್ಡೆಯನ್ನು ತೊಳೆದು, ಒರೆಸಿಕೊಂಡು ಸಿಪ್ಪೆ ತೆಗೆಯಿರಿ. ನಂತರ ತೆಳುವಾಗಿ ಸ್ಲೈಸ್ ಮಾಡಿಕೊಳ್ಳಿ.
ನಂತರ ಒಂದು ಕಾಟನ್ ಬಟ್ಟೆಯಿಂದ ಆಲೂಗಡ್ಡೆಯ ಸ್ಲೈಸ್‌ಗಳ ತೇವಾಂಶವನ್ನು ಒರೆಸಿ ತೆಗೆಯಿರಿ.
ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆ ಕಾಯಲು ಇಡಿ.
ಕಾದ ಎಣ್ಣೆಗೆ ಆಲೂಗಡ್ಡೆಯ ಸ್ಲೈಸ್‌ಗಳನ್ನು ಹಾಕಿ ಎಣ್ಣೆಯಲ್ಲಿ ಕರಿಯಿರಿ.
ಆಲೂಗಡ್ಡೆಯ ಸ್ಲೈಸ್‌ಗಳು ಗೋಲ್ಡನ್ ಬಣ್ಣಕ್ಕೆ ಬಂದ ಬಳಿಕ ಎಣ್ಣೆಯಿಂದ ತೆಗೆಯಿರಿ. ನಂತರ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಖಾರದಪುಡಿನ್ನು ಹಾಕಿ ಪಾತ್ರೆಯಲ್ಲಿ ಮಿಶ್ರಣ ಮಾಡಿ.
ಸವಿಯಲು ಸಿದ್ದ ಆಲೂಗಡ್ಡೆ ಚಿಪ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.