ಪುಟಾಣಿ ಪೇಡ
ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನತೆ ಊಟದಲ್ಲಿ ಜೊತೆಗೆ ಈ ವಿಶೇಷ ‘ಪುಟಾಣಿ ಪೇಡ’ ಖಾದ್ಯವನ್ನು ಮಾಡುತ್ತಾರೆ. ಪುಟಾಣಿ ಪೇಡವನ್ನು ಸರಳವಾಗಿ ಹೇಗೆ ಮಾಡುವುದು ಎಂದು ನೋಡೋಣ ಬನ್ನಿ.
ಪುಟಾಣಿ ಪೇಡ ಮಾಡಲು ಬೇಕಾಗುವ ಸಾಮಾಗ್ರಿಗಳು
ಪುಟಾಣಿ (ಹುರಿಗಡಲೆ) : 2 ಕಪ್
ಸಕ್ಕರೆ: 1 ಕಪ್
ನೀರು: 1 ಕಪ್
ಕೊಬ್ಬರಿ ತುರಿ: ಅಗತ್ಯಕ್ಕೆ ಬೇಕಾದಷ್ಟು
ತುಪ್ಪ: ಅಗತ್ಯಕ್ಕೆ ಬೇಕಾದಷ್ಟು
ಪುಟಾಣಿ ಪೇಡ ಮಾಡುವ ವಿಧಾನ
ಮೊದಲು ಪುಟಾಣಿಯನ್ನು (ಹುರಿಗಡಲೆ) ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಗೆ ಒಂದು ಕಪ್ ನೀರು, ಅದಕ್ಕೆ ಸಕ್ಕರೆ ಹಾಕಿ ಅಂಟು ಬರುವವರೆಗೂ ಕಾಯಿರಿ.
ನಂತರ ಸಕ್ಕರೆ ಪಾಕಕ್ಕೆ ತರಿತರಿಯಾಗಿ ರುಬ್ಬಿಕೊಂಡ ಪುಟಾಣಿ ಹಿಟ್ಟನ್ನು ನಿಧಾನವಾಗಿ ಮಿಶ್ರಣ ಮಾಡಿ. ಬಳಿಕ ಒಂದು ತಟ್ಟೆಗೆ ತುಪ್ಪ ಹಾಕಿ ಅದರ ಮೇಲೆ ಕಲಸಿಕೊಂಡ ಹಿಟ್ಟನ್ನು ಹಾಕಿ. ನಂತರ ಅದರ ಮೇಲೆ ಕೊಬ್ಬರಿ ತುರಿ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಉತ್ತರ ಕರ್ನಾಟಕದ ವಿಶೇಷ ‘ಪುಟಾಣಿ ಪೇಡ’ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.