ADVERTISEMENT

ಹೃದಯಾಘಾತದಿಂದ ದೂರ ಇರಲು ಈ ಹಣ್ಣನ್ನು ತಿನ್ನಿರಿ: ನಟಿ ಭಾಗ್ಯಶ್ರೀ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 11:35 IST
Last Updated 26 ನವೆಂಬರ್ 2025, 11:35 IST
<div class="paragraphs"><p>ನಟಿ ಭಾಗ್ಯಶ್ರೀ</p></div>

ನಟಿ ಭಾಗ್ಯಶ್ರೀ

   

ಚಿತ್ರ: ಇನ್‌ಸ್ಟಾಗ್ರಾಮ್

ಸಾಮಾನ್ಯವಾಗಿ ಚಳಿಗಾಲ ಬಂತು ಎಂದರೆ ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ಅದರಲ್ಲೂ ಮಹಿಳೆಯರು ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸೋದಕ್ಕೆ ಶುರು ಮಾಡುತ್ತಾರೆ. ಕೇವಲ ತ್ವಚೆ ಮಾತ್ರವಲ್ಲದೆ ಆರೋಗ್ಯದ ಮೇಲೂ ಕೂಡ ನಿಗಾ ವಹಿಸುವುದು ಉತ್ತಮ.

ADVERTISEMENT

ಈ ಚಳಿಗಾಲದ ಸಮಯದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಹಸಿರು ತರಕಾರಿಗಳ ಜೊತೆಗೆ ಚಳಿಗಾಲದಲ್ಲಿ ವಿಶೇಷ ಹಣ್ಣುಗಳನ್ನು ತಿನ್ನಬೇಕು ಎಂದು ಬಾಲಿವುಡ್ ನಟಿ, ಫಿಟ್ನೆಸ್ ತರಬೇತುಗಾರ್ತಿ ಭಾಗ್ಯಶ್ರೀ ಹೇಳಿದ್ದಾರೆ.

ಪರ್ಸಿಮನ್ ಅಥವಾ ಅಮರ್ಫಾಲ್ ಹಣ್ಣು

‌ಬಾಲಿವುಡ್ ನಟಿ, ಫಿಟ್ನೆಸ್ ತರಬೇತುಗಾರ್ತಿ ಭಾಗ್ಯಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ತ್ವಚೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ.

ಅದರ ಜೊತೆಗೆ ಅವರು ಈ ಬಾರಿ ‘ಕಣ್ಣಿನ ದೃಷ್ಟಿ ಹೆಚ್ಚಿಸಲು, ಕೂದಲನ್ನು ಬಲಪಡಿಸಲು, ಚರ್ಮಕ್ಕೆ ಹೊಳಪನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಪರ್ಸಿಮನ್ ಅಥವಾ ಅಮರ್ಫಾಲ್ (Persimmon) ಹಣ್ಣು ನಿಮಗೆ ಸಹಕಾರಿ. ಹೊಸ ವರ್ಷದಲ್ಲಿ ನಿಮ್ಮ ದೇಹ ಸದೃಢವಾಗಿರಲು ಈಗಿನಿಂದಲೇ ಈ ಪರ್ಸಿಮನ್ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿ’ ಎಂದು ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಜನರು ಹೆಚ್ಚಾಗಿ ಕಿತ್ತಳೆ, ಸೇಬು ಮತ್ತು ಪೇರಳೆ ಹಣ್ಣನ್ನು ತಿನ್ನುತ್ತಾರೆ. ಆದರೆ ಪರ್ಸಿಮನ್ ಅಥವಾ ಅಮರ್ಫಾಲ್ ಹಣ್ಣು ನಾಲ್ಕು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಎಂದು ನಟಿ ಭಾಗ್ಯಶ್ರೀ ಮಾಹಿತಿ ನೀಡಿದ್ದಾರೆ. ಪರ್ಸಿಮನ್ ಅಥವಾ ಅಮರ್ಫಾಲ್ ಹಣ್ಣನ್ನು ತಿನ್ನುವುದರಿಂದ ಕೂದಲು, ಚರ್ಮ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ. ಮತ್ತು ಇದು ನಿಮ್ಮ ಕಣ್ಣುಗಳಿಗೂ ಒಳ್ಳೆಯದು ಎಂದಿದ್ದಾರೆ. ಈ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಫೈಬರ್ ಮತ್ತು ವಿಟಮಿನ್ ಎ, ಸಿ ಮತ್ತು ಇ ದೊರಕುತ್ತವೆ. ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ಮುಖ್ಯವಾಗಿ ಪರ್ಸಿಮನ್ ಹಣ್ಣು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದಲ್ಲದೆ, ಚಳಿಗಾಲದಲ್ಲಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಚಳಿಗಾಲದ ಸಮಯದಲ್ಲಿ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.