ADVERTISEMENT

2040ರ ವೇಳೆಗೆ ಸ್ತನ ಕ್ಯಾನ್ಸರ್‌ನಿಂದ ವರ್ಷಕ್ಕೆ 10ಲಕ್ಷ ಸಾವು ಸಂಭವ: ಲ್ಯಾನ್ಸೆಟ್

ಪಿಟಿಐ
Published 16 ಏಪ್ರಿಲ್ 2024, 3:05 IST
Last Updated 16 ಏಪ್ರಿಲ್ 2024, 3:05 IST
<div class="paragraphs"><p>ಸ್ತನ ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)</p></div>

ಸ್ತನ ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)

   

ನವದೆಹಲಿ: ಜಗತ್ತಿನೆಲ್ಲೆಡೆ ಕ್ಯಾನ್ಸರ್‌ ಸಾಮಾನ್ಯ ಕಾಯಿಲೆ ಎನ್ನುವಂತಾಗುತ್ತಿದೆ. ಈ ನಡುವೆ ಸ್ತನ ಕ್ಯಾನ್ಸರ್‌ನಿಂದ 2040ರ ವೇಳೆಗೆ 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಆಯೋಗ ವರದಿಯಲ್ಲಿ ಹೇಳಿದೆ.

2020ರ ಅಂತ್ಯದವರೆಗಿನ ಅಧ್ಯಯನದಲ್ಲಿ ಐದು ವರ್ಷಗಳಲ್ಲಿ ಸುಮಾರು 78 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅದೇ ವರ್ಷ ಸುಮಾರು 6,85,000 ಮಹಿಳೆಯರು ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.

ADVERTISEMENT

2020 ರಲ್ಲಿ ಜಾಗತಿಕವಾಗಿ 23 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದವು. 2040ರ ವೇಳೆಗೆ ಇದು 30 ಲಕ್ಷಕ್ಕಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಆಯೋಗವು ಅಂದಾಜಿಸಿದೆ.

ರೋಗಿಗಳೊಂದಿಗೆ ವೈದ್ಯರು ಸರಿಯಾದ ಸಂವಹನ ನಡೆಸಿ, ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅವರಲ್ಲಿ ಸಕಾರಾತ್ಮಕ ಯೋಚನೆಗಳನ್ನು ತುಂಬಬೇಕು. ಅದೇ ರೀತಿ ರೋಗಿಗಳೂ ಕೂಡ ವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸಿದರೆ ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ಆಯೋಗ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.