
ಸಾಂದರ್ಭಿಕ ಚಿತ್ರ
: ಎಐ
ಗೋವನ್ನು ಕೇವಲ ಒಂದು ಪ್ರಾಣಿಯಾಗಿ ಕಾಣದೆ, ಅದನ್ನು ದೈವಿಕ ಸ್ವರೂಪವಾಗಿ ನೋಡುತ್ತೇವೆ. ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಗೋವಿನ ಪ್ರತೀ ಉತ್ಪನ್ನದಲ್ಲೂ ಅನೇಕ ಪ್ರಯೋಜನಗಳಿವೆ ಎಂದು ಹಲವು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ಹಾಗೂ ಪ್ರಾಚೀನ ಆಯುರ್ವೇದ ಪದ್ಧತಿಯಲ್ಲಿ ಗೋ ಮೂತ್ರಕ್ಕೆ ವಿಶೇಷ ಸ್ಥಾನ ನೀಡಲಾಗಿದೆ.
ಈ ಬಗ್ಗೆ ಎನ್‌ಡಿಆರ್‌ಎ ನಿವೃತ್ತ ಮುಖ್ಯ ವಿಜ್ಞಾನಿಗಳಾದ ಡಾ. ಕೆ.ಪಿ. ರಮೇಶ್ ಅವರು ‘ಪ್ರಜಾವಾಣಿ’ ಡಿಜಿಟಲ್ ಜೊತೆ ಮಾತನಾಡಿದರು. ‘ಗೋ ಮೂತ್ರವನ್ನು ಅನೇಕ ಚಿಕಿತ್ಸೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅದು ನೂರಾರು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಚರಕ ಸಂಹಿತ, ಸುಶ್ರುತ ಸಂಹಿತಾ, ಅಥರ್ವ ವೇದ, ಭಾವಪ್ರಕಾಶ, ಅಮೃತ ಸಾಗರ ಸೇರಿದಂತೆ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಗೋ ಮೂತ್ರದ ಚಿಕಿತ್ಸೆ ಬಗ್ಗೆ ವಿವರಣೆ ನೀಡಲಾಗಿದೆ’.
ಪಂಚಗವ್ಯ ಎಂದರೇನು?
ಹಸುವಿನ ಮೂತ್ರ, ಹಾಲು, ತುಪ್ಪ, ಮೊಸರು ಮತ್ತು ಸಗಣಿಯಿಂದ ಪಡೆಯುವುದನ್ನೇ ಪಂಚಗವ್ಯ ಎಂದು ಕರೆಯಲಾಗುತ್ತದೆ.
ಯಾವೆಲ್ಲ ರೋಗಗಳಿಗೆ ಗೋಮೂತ್ರ ಬಳಸಬಹುದು
ಮಧುಮೇಹ, ರಕ್ತದೊತ್ತಡ, ಸೋರಿಯಾಸಿಸ್, ಅಸ್ತಮ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್, ಏಡ್ಸ್, ಮೂಲವ್ಯಾಧಿ, ಸಂಧಿವಾತ, ತುರಿಕೆ, ಮೈಗ್ರೇನ್, ಹುಣ್ಣು, ಥೈರಾಯ್ಡ್ ಸಮಸ್ಯೆ, ಗಾಯ ಗುಣಪಡಿಸುವಿಕೆ, ಚರ್ಮರೋಗ ಗುಣಪಡಿಸುವಿಕೆ, ತುರುಕೆ ತಡೆಕಟ್ಟುವಿಕೆ, ಸ್ತ್ರೀರೋಗ ಸಮಸ್ಯೆಗಳ ಬಗ್ಗೆಯೂ ಆಯುರ್ವೇದದಲ್ಲಿ ಉಲ್ಲೇಖವಿದೆ ಎಂದು ಡಾ. ಕೆ.ಪಿ. ರಮೇಶ್ ಅವರು ತಿಳಿಸಿದರು.
ಗೋಮೂತ್ರಕ್ಕೆ ಯುಎಸ್ ಪೇಟೆಂಟ್
ಬಯೋ ಎನಾನ್ಸರ್ ಎಂಬ ಪ್ರಾಪರ್ಟಿಗಾಗಿ ಕೌನ್ಸಿಲ್ ಆಫ್ ಇಂಡಸ್ಟ್ರಿಯಲ್ ರೀಸರ್ಚ್ (ಸಿಎಸ್‌ಐಆರ್) ಸಂಸ್ಥೆ ಗೋಮೂತ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂರು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಸಿಎಸ್‌ಐಆರ್ ಸಂಸ್ಥೆ ಇದೊಂದು ಭಾರತದ ಸಂಸ್ಥೆಯಾಗಿದ್ದು, ಭಾರತೀಯ ವಿಜ್ಞಾನಿಗಳು ಅಮೆರಿಕದಲ್ಲಿ ಗೋಮೂತ್ರದ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿ ಪೇಟೆಂಟ್ ಪಡೆದುಕೊಂಡಿದ್ದಾರೆ.
ಹಸುವಿನ ಮೂತ್ರ ನೇರವಾಗಿ ಸೇವಿಸಬಹುದಾ?
ಖಂಡಿತವಾಗಿಯೂ ಹಸುವಿನ ಮೂತ್ರವನ್ನು ನೇರವಾಗಿ ಕುಡಿಯುವುದನ್ನು ತಪ್ಪಿಸಬೇಕು. ಬದಲಾಗಿ ಸಂಸ್ಕರಿಸಿದ, ಸಂಶೋಧನೆಗೆ ಒಳಪಟ್ಟಂತಹ ಗೋವಿನ ಮೂತ್ರವನ್ನು ಮಾತ್ರ ಸೇವಿಸಬೇಕು. ಯಾಕೆ ಅಂದರೆ, ಹಸುವಿನಲ್ಲಿ ಯಾವುದಾದರು ರೋಗಗಳು ಇದ್ದರೆ, ಅದರ ಮೂತ್ರವನ್ನು ನೇರವಾಗಿ ಕುಡಿಯುವುದರಿಂದ ಆ ರೋಗಗಳು ವ್ಯಕ್ತಿಯ ದೇಹದ ಒಳಗೆ ಸೇರುವ ಸಾಧ್ಯತೆ ಇದೆ ಎಂದು ಡಾ. ಕೆ.ಪಿ. ರಮೇಶ್ ಅವರು ತಿಳಿಸಿದರು.
ಗೋ ಮೂತ್ರ ನೇರವಾಗಿ ಸೇವಿಸುವವರು ತಿಳಿದಿರಬೇಕಾದ ಅಂಶಗಳೇನು?
ಮನೆಯಲ್ಲಿರುವ ಜೆರ್ಸಿ ಅಥವಾ ಜಾತಿ ಹಸುವಿನ ಮೂತ್ರ ಸೇವಿಸುವುದನ್ನು ತಪ್ಪಿಸಬೇಕು
ಮಲೆನಾಡು ಗಿಡ್ಡದಂತಹ ದೇಸಿ ತಳಿಗಳ ಗೋಮೂತ್ರ ಸೇವಿಸುವುದು ಉತ್ತಮ
ಹಸು ಆರೋಗ್ಯವಂತವಾಗಿದ್ದರೆ ಆ ಹಸುವಿನ ಮೂತ್ರ ಸೇವಿಸಬಹುದು.
ಅತೀ ಹೆಚ್ಚು ನಡೆದಾಡುವ, ಗುಡ್ಡಗಾಡಿನ ಹುಲ್ಲು ಸೇವಿಸುವ ಹಸುವಿನ ಮೂತ್ರ ಸೇವಿಸಬಹುದು.
ಗೋ ಮೂತ್ರದಲ್ಲಿ ಯಾವೆಲ್ಲಾ ಅಂಶಗಳು ಇರುತ್ತವೆ?
ಸೋಡಿಯಂ, ನೈಟ್ರೋಜನ್, ಸಲ್ಫರ್, ವಿಟಮಿನ್ ಎ, ಬಿ, ಸಿ,ಡಿ ಮತ್ತು ಇ ಅಂಶ, ಮಿನರಲ್, ಮ್ಯಾಂಗನಿಸ್, ಐರನ್, ಸಿಲಿಕಾನ್, ಕ್ಲೋರಿನ್, ಮೆಗ್ನಿಷಿಯಂ, ಸಿಟ್ರಿಕ್, ಕ್ಯಾಲ್ಸಿಯಂ ಸಾಲ್ಟ್, ಲ್ಯಾಕ್ಟೋಸ್ ಹಾಗೂ ಹಾರ್ಮೋನ್ ಅಂಶಗಳನ್ನು ಗೋ ಮೂತ್ರ ಹೊಂದಿರುತ್ತದೆ.
ಲೇಖಕರು: ಡಾ. ಕೆ.ಪಿ. ರಮೇಶ್, ನಿವೃತ್ತ ಮುಖ್ಯ ವಿಜ್ಞಾನಿ, ಎನ್‌ಡಿಆರ್‌ಎ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.