ADVERTISEMENT

Vegan Eggs | ಸಸ್ಯಾಹಾರಿ ಮೊಟ್ಟೆಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದೇ?

ಡಾ.ಸ್ಮಿತಾ ಜೆ ಡಿ
Published 17 ನವೆಂಬರ್ 2022, 11:09 IST
Last Updated 17 ನವೆಂಬರ್ 2022, 11:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೌಷ್ಠಿಕಾಂಶವುಳ್ಳ ಸಮತೋಲನವಾದ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ. ಹಣ್ಣು ತರಕಾರಿಗಳೊಂದಿಗೆ ಮಾಂಸಾಹಾರ ಸೇವನೆಯು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ‘ವೇಗನ್ ಡಯಟ್’ ಪ್ರಚಲಿತವಾಗಿದೆ. ಅಂತಹದೇ ಒಂದು ಆಹಾರ ‘ವೇಗನ್ ಮೊಟ್ಟೆ’. ಮೊಟ್ಟೆಯನ್ನು ತಿನ್ನದ ಅನೇಕರು ಇತ್ತೀಚಿನ ದಿನಗಳಲ್ಲಿ ‘ವೇಗನ್ ಮೊಟ್ಟೆ’ (ಸಸ್ಯಾಹಾರಿ ಮೊಟ್ಟೆ) ಸೇವನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ.

ನೈಜ‌ ಮೊಟ್ಟೆಗಳನ್ನು ಆಹಾರ ಪದಾರ್ಥವಾಗಿ ಮತ್ತು ಬೇಕರಿಗಳಲ್ಲಿ ಕೇಕ್‌ ಹಾಗೂ ಮಯೋನೀಸ್‌ ತಯಾರಿಸಲು ಬಳಸುವುದನ್ನು ಕಾಣುತ್ತೇವೆ. ಜತೆಗೆ, ಮೊಟ್ಟೆಯನ್ನು ತರಕಾರಿಗಳೊಂದಿಗೆ ಬಳಸುವುದರಿಂದ ಗ್ಲುಟೆನ್‌ ಇಲ್ಲದ ಕಾರಣ ಕೊಲೆಸ್ಟ್ರಾಲ್‌ನಿಂದ ಮುಕ್ತವಾಗಿರುತ್ತದೆ ಎಂದು ಹೇಳಲಾಗುತ್ತದೆ.

ನೈಜ ಮೊಟ್ಟೆ ಹಾಗೂ ಕೃತಕ (ಸಸ್ಯಾಹಾರಿ) ಮೊಟ್ಟೆ ನಡುವಿನ ವ್ಯತ್ಯಾಸಗಳು...

ADVERTISEMENT

* ನೈಜ‌ ಮೊಟ್ಟೆಗಳಲ್ಲಿ ಜೆಲ್ ಆಗುವಂತಹ ಗುಣ, ನೊರೆಯ ಉತ್ಪಾದನೆ ಹಾಗೂ ಎಮಲ್ಸಿಫಿಕೇಷನ್‌ನ ಗುಣವಿರುವುದರಿಂದ ಬೇಕರಿಗಳಲ್ಲಿ ಕೇಕ್‌ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.

* ಪೌಲ್ಟ್ರಿಗಳಲ್ಲಿ ಕೋಳಿಗಳ ಶೀಘ್ರ ಬೆಳವಣಿಗೆಗೆ ಬಳಸುವ ಆ್ಯಂಟಿ ಬಯಾಟಿಕ್‌ಗಳು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ.

* ಹೆಚ್ಚು ಆ್ಯಂಟಿ ಬಯಾಟಿಕ್‌ಗಳನ್ನು ಬಳಸಿದ ಮೊಟ್ಟೆಗಳ ಸೇವನೆಯಿಂದ ಚರ್ಮದ ಅಲರ್ಜಿ, ಮೂಗು ಕಟ್ಟುವಿಕೆ, ಉಸಿರಾಟ ಸಮಸ್ಯೆ, ಜೀರ್ಣಕ್ರಿಯೆ ಸಂಬಂಧಪಟ್ಟ ರೋಗಗಳು, ಸಾಲ್ಮೋನೆಲ್ಲ ಸೋಂಕು ಮುಂತಾದ ಕಾಯಿಲೆಗೆ ತುತ್ತಾಗಬಹುದು.

* ಪ್ರಾಣಿಗಳಿಂದ ಹರಡುವ ಕಾಯಿಲೆಗಳಿಂದ ದೂರವಿರಲು ವೇಗನ್ ಮೊಟ್ಟೆಗಳನ್ನು (ಸಸ್ಯಾಹಾರಿ) ಬಳಸುವುದು ಸೂಕ್ತ.

* ವೇಗನ್ ಮೊಟ್ಟೆಗಳನ್ನು ಹೆಸರುಬೇಳೆ ಮತ್ತು ಸೋಯಾ, ದ್ವಿದಳ ಧಾನ್ಯಗಳು, ಬಟಾಣಿ, ಕಡಲೆಕಾಳು ಮತ್ತು ಇತರ ಎಲ್ಲಾ ಸಸ್ಯ ಮೂಲಗಳನ್ನು ಮಿಶ್ರಣ ಮಾಡುವ ಮೂಲಕ ಸಂಸ್ಕರಿಸಲಾಗುತ್ತದೆ.

* ವೇಗನ್ ಮೊಟ್ಟೆಗಳಲ್ಲಿ ಪ್ರೋಟೀನ್‌ಗಳು, ಹೈಪೋಕ್ಲೋರೈಟ್ಸ್‌, ಎಮಲ್ಸಿಫಿಕೇಷನ್‌ ಗುಣವಿರುತ್ತದೆ. ಇವು ಅಲರ್ಜಿ ಹಾಗೂ ಗ್ಲುಟೆನ್‌ನಿಂದ ಮುಕ್ತವಾಗಿರುತ್ತವೆ.

* ವೇಗನ್ ಮೊಟ್ಟೆಗಳು ಕೊಲೆಸ್ಟ್ರಾಲ್‌ನಿಂದ ಮುಕ್ತವಾಗಿರುವುದರಿಂದ ಆರೋಗ್ಯಕ್ಕೆ ಪೂರಕ.

* ವೇಗನ್ ಮೊಟ್ಟೆಗಳು ಪುಡಿ, ದ್ರವ ಹಾಗೂ ಮೊಟ್ಟೆಯ ರೂಪದಲ್ಲಿ ದೊರೆಯುತ್ತವೆ.

* ವೇಗನ್ ಮೊಟ್ಟೆ ತಯಾರಿಕೆಯಲ್ಲಿ ಎಮಲ್ಸಿಫೈ ಮಾಡುವ ಗುಣವನ್ನು ಹೆಚ್ಚಿಸಲು ಹೈಪೋಕ್ಲೋರೈಟ್ಸ್‌ಗಳ ಬಳಕೆ ಮಾಡಲಾಗುತ್ತದೆ.

* ವೇಗನ್ ಮೊಟ್ಟೆಯಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ.

* ವೇಗನ್ ಮೊಟ್ಟೆಯನ್ನು ನೋಡಲು, ರುಚಿ, ಪೌಷ್ಠಿಕಾಂಶದಲ್ಲೂ ನೈಜ ಮೊಟ್ಟೆಯನ್ನು ಹೋಲುತ್ತದೆ.

ಲೇಖಕರು: ಡಾ. ಸ್ಮಿತಾ ಜೆ.ಡಿ., ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.