ADVERTISEMENT

Health Tips | ಸದೃಢ ದೇಹಕ್ಕೆ ತರಕಾರಿಗಳ ಸೇವನೆ ಏಕೆ ಮುಖ್ಯ: ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 12:18 IST
Last Updated 13 ಡಿಸೆಂಬರ್ 2025, 12:18 IST
<div class="paragraphs"><p>ಚಿತ್ರ: ಗೆಟ್ಟಿ&nbsp;</p></div>
   

ಚಿತ್ರ: ಗೆಟ್ಟಿ 

ಹಸಿರು ತರಕಾರಿಗಳು ದೈನಂದಿನ ಆಹಾರಕ್ಕೆ ಸೇರಿಸಬಹುದಾದ ಅತ್ಯಂತ ಶಕ್ತಿಶಾಲಿ ಆಹಾರಗಳಾಗಿವೆ. ತರಕಾರಿ ಹಾಗೂ ಸೊಪ್ಪುಗಳಲ್ಲಿರುವ ಪೋಷಕಾಂಶಗಳು ದೇಹವನ್ನು ಶಕ್ತಿಯುತವಾಗಿ ಇಡಲು ಪ್ರಮುಖ ಪಾತ್ರವಹಿಸುತ್ತವೆ. ಇವು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ರೋಗನಿರೋಧಕ ಶಕ್ತಿ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. 

ಸೊಪ್ಪು ಮತ್ತು ತರಕಾರಿಗಳು ವಿಶೇಷವಾಗಿ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಪಾಲಕ್, ಮೆಂತ್ಯೆ, ದಂಟು, ಬ್ರೊಕೊಲಿ, ಬೀನ್ಸ್, ಎಲೆಕೋಸು, ಬಟಾಣಿ ಮತ್ತು ಇತರೆ ಹಸಿರು ತರಕಾರಿಗಳು ವಿಟಮಿನ್ ಎ, ಸಿ, ಕೆ ಮತ್ತು ವಿಟಮಿನ್‌ ಬಿಯೊಂದಿಗೆ ಸಮೃದ್ಧವಾಗಿವೆ.‌

ADVERTISEMENT
  • ವಿಶೇಷವಾಗಿ ತರಕಾರಿಗಳಲ್ಲಿ ಕಂಡುಬರುವ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುವುದಲ್ಲದೆ, ಎಲುಬುಗಳ ಆರೋಗ್ಯಕ್ಕೂ ಸಹಕಾರಿಯಾಗಿದೆ. ಹಸಿರು ತರಕಾರಿಗಳಲ್ಲಿರುವ ಕಬ್ಬಿಣ ಮತ್ತು ಫೋಲೇಟ್ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. 

  • ಹಸಿರು ತರಕಾರಿಗಳಲ್ಲಿನ ನಾರಿನಾಂಶ ದೇಹದ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ. ಆರೋಗ್ಯಕರ ಕರುಳು ಕೇವಲ ಜೀರ್ಣಕ್ರಿಯೆಗೆ ಮಾತ್ರ ಉತ್ತಮವಲ್ಲ, ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗಿದೆ. 

  • ಹೃದಯದ ಆರೋಗ್ಯಕ್ಕೆ ಹಸಿರು ತರಕಾರಿಗಳ ಸೇವನೆ ಅತ್ಯುತ್ತಮವಾಗಿವೆ. ತರಕಾರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಕೊಲೆಸ್ಟಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ಆರೋಗ್ಯಕರ ರಕ್ತದೊತ್ತಡವನ್ನು ಬೆಂಬಲಿಸುತ್ತವೆ.

  • ಬ್ರೊಕೊಲಿ, ಪಾಲಕ್ ಮತ್ತು ಬೀನ್ಸ್‌ನಂತಹ ತರಕಾರಿಗಳು ರಕ್ತನಾಳಗಳನ್ನು ಬಲಪಡಿಸುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. 

  • ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕಗಳು ಚರ್ಮದ ಹಾನಿಯನ್ನು ಸರಿಪಡಿಸಿ ಮೊಡವೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 

  • ಹಸಿರು ತರಕಾರಿಗಳು ಎಲುಬು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ವಿಟಮಿನ್ ಕೆ ಗಳು ಎಲುಬುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿವೆ.

  • ಗರ್ಭಿಣಿಯರು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಏಕೆಂದರೆ ಫೋಲೇಟ್ ಮಗುವಿನ ಮಿದುಳು ಮತ್ತು ಬೆನ್ನುಮೂಳೆಯ ಬೆಳವಣಿಗೆಗೆ ಸಹಕಾರಿಯಾಗಿದೆ. 

ಹಸಿರು ತರಕಾರಿಗಳು ದೀರ್ಘಾವಧಿಯ ಆರೋಗ್ಯಕ್ಕಾಗಿ ತಿನ್ನಬಹುದಾದ ಅತ್ಯಂತ ಬೆಲೆಬಾಳುವ ಆಹಾರಗಳಾಗಿವೆ. ಇವು ‌ರೋಗನಿರೋಧಕ ಶಕ್ತಿ, ಜೀರ್ಣಕ್ರಿಯೆ, ಹೃದಯ ಆರೋಗ್ಯ, ಚರ್ಮದ ಆರೋಗ್ಯ ಮತ್ತು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ. 

ಲೇಖಕರು: ಡಾ. ವಿ ಮಾಲತಿ, ಸಲಹೆಗಾರರು - ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ, ರೇನ್ಬೋ ಮಕ್ಕಳ ಆಸ್ಪತ್ರೆ, ಮಾರತ್ತಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.