ADVERTISEMENT

ಕೋವಿಡ್ ಕಾಲದಲ್ಲಿ ತರಕಾರಿ, ಹಣ್ಣುಗಳನ್ನು ಶುಚಿಗೊಳಿಸಿ ಬಳಸುವ ಬಗೆ ಹೇಗೆ?

ಕುನಾಲ್ ಕಪೂರ್
Published 22 ಮೇ 2021, 14:19 IST
Last Updated 22 ಮೇ 2021, 14:19 IST
ಹಣ್ಣು ಮತ್ತು ತರಕಾರಿ
ಹಣ್ಣು ಮತ್ತು ತರಕಾರಿ   

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಭ್ಯವಿರುವ ಏಕಮಾತ್ರ ಪ್ರಾಕೃತಿಕ ವಿಧಾನವೆಂದರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ಸದೃಢರಾಗಿರುವುದು. ನೀವು ನಿಮ್ಮ ದೈನಂದಿನ ಆಹಾರದ ಕ್ರಮವಾಗಿ ಅನೇಕ ವಿಟಮಿನ್ ಗಳನ್ನು ಆಹಾರದಲ್ಲಿ ಸೇರಿಸಿದರೂ, ಸಂತುಲಿತ ಮತ್ತು ಹಣ್ಣು ಹಾಗೂ ತರಕಾರಿಗಳನ್ನು ಹೊಂದಿರುವ ಆಹಾರ ಸೇವಿಸುವುದು ಮುಖ್ಯ. ಪ್ರಾಕೃತಿಕ ಉತ್ಪನ್ನಗಳು ನಿಮ್ಮ ಶರೀರಕ್ಕೆ ಅನೇಕ ಪೋಷಕಾಂಶಗಳನ್ನು ನೀಡುವ ಮೂಲಕ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಮಾಸ್ಟರ್‌ ಶೆಫ್‌ ಇಂಡಿಯಾ ಟಿವಿ ಶೋ ದ ಪ್ರಮುಖ ತೀರ್ಪುಗಾರರಲ್ಲಿ ಒಬ್ಬರಾಗಿರುವ ಶೆಫ್ ಕುನಾಲ್ ಕಪೂರ್ ಹೀಗೆ ಹೇಳಿದ್ದಾರೆ, ಹಣ್ಣು ಮತ್ತು ತರಕಾರಿಗಳು ,ಸ್ಥಳೀಯ ತರಕಾರಿ ಅಂಗಡಿಗಳು, ರೀಟೇಲ್ ಅಂಗಡಿಗಳು ಅಥವಾ ಮನೆಗೆ ತಲುಪುವ ಮೊದಲು ದೀರ್ಘದೂರ ಪ್ರಯಾಣಿಸಿರುತ್ತವೆ. ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನಾವು ಅವುಗಳನ್ನು ಬೇವಿನ ಸಾರ ಹೊಂದಿರುವ ನೀಮ್ ವಾಶ್ ಬಳಸಿ ಚೆನ್ನಾಗಿ ತೊಳೆಯಬೇಕು. ಅವುಗಳನ್ನು ಹಸಿಯಾಗಿ ತಿನ್ನುವುದಾದರೆ, ಅತಿಸಾರದಂತಹ ರೋಗಗಳ ವಿರುದ್ಧ ಹೋರಾಡಲು ಅವುಗಳನ್ನು ಸ್ವಚ್ಛಗೊಳಿಸುವುದು ಅತ್ಯಂತ ಪ್ರಮುಖ ಹಂತವಾಗಿದೆ" ಎಂದು ಹೇಳಿದ್ದಾರೆ.

ಜೊತೆಗೆ ಈ ಅನಿಶ್ಚಿತ ಸಮಯದಲ್ಲಿ ನಿಮ್ಮ ಪ್ರಾಕೃತಿಕ ಉತ್ಪನ್ನಗಳನ್ನು ಸುರಕ್ಷಿತವಾಗಿಡುವ ವಿಧಾನಗಳನ್ನು ಸಹ ಪಟ್ಟಿ ಮಾಡಿದ್ದು, ಅವುಗಳನ್ನು ಸಂಗ್ರಹಿಸುವ ಸೂಕ್ತ ವಿಧಾನ ತಿಳಿಸಿದ್ದಾರೆ

ADVERTISEMENT

ಸಂಗ್ರಹಿಸುವ ಸೂಕ್ತ ವಿಧಾನ

*ವಿಂಗಡಣೆ- ನೀವು ಮನೆಗೆ ತರಕಾರಿಯನ್ನು ತಂದ ಕೂಡಲೇ ಅವುಗಳನ್ನು ವಿಂಗಡಿಸಬೇಕು, ಯಾವುದು ಸ್ವಲ್ಪ ಹಾಳಾಗಿದೆ ಅಥವಾ ಹಾಳಾಗುವ ಹಂತದಲ್ಲಿದೆ ಎನ್ನುವುದನ್ನು ಗಮನಿಸಬೇಕು. ಅವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮೊದಲು ಬಳಸಬೇಕು.

*ಸ್ವಚ್ಛಗೊಳಿಸುವುದು- ಅವುಗಳನ್ನು ವಿಂಗಡಿಸಿದ ನಂತರ, ಪ್ರಾಕೃತಿಕ ಪದಾರ್ಥಗಳಿಂದ ತಯಾರಿಸಲಾದ ತರಕಾರಿ ಮತ್ತು ಹಣ್ಣುಗಳನ್ನು ಸ್ವಚ್ಛಗೊಳಿಸುವ ದ್ರಾವಕದಿಂದ ಅವುಗಳನ್ನು ಸ್ವಚ್ಛಗೊಳಿಸಬೇಕು. ಇದು ನಿಮ್ಮ ಪ್ರಾಕೃತಿಕ ಉತ್ಪನ್ನಗಳಲ್ಲಿರುವ ಕ್ರಿಮಿ ಮತ್ತು ಕೀಟನಾಶಕಗಳು ರೆಫ್ರಿಜರೇಟರ್ ನಲ್ಲಿಡುವ ಮೊದಲು ಅಥವಾ ಇತರ ಜಾಗದಲ್ಲಿ ಸಂಗ್ರಹಿಸುವ ಮೊದಲು ನಾಶವಾಗುವುದನ್ನು ಖಚಿತಪಡಿಸುತ್ತವೆ. ಅವುಗಳನ್ನು ಬೇಯಿಸುವ/ಸೇವಿಸುವ ಮೊದಲು ತರಕಾರಿ ಮತ್ತು ಹಣ್ಣು ತೊಳೆಯುವ ದ್ರಾವಣದಿಂದ ತೊಳೆಯುವುದನ್ನು ಖಚಿತಪಡಿಸಿಕೊಳ್ಳಿ.

*ಪ್ರಾಕೃತಿಕ ಉತ್ಪನ್ನಗಳನ್ನು ಕತ್ತರಿಸಿದ ನಂತರ ತೊಳೆಯಬೇಡಿ- ಹೆಚ್ಚಿನ ಜನ ಕತ್ತರಿಸುವ ಮೊದಲು ತರಕಾರಿ ಮತ್ತು ಹಣ್ಣುಗಳನ್ನು ತೊಳೆಯುವುದಿಲ್ಲ. ಅವುಗಳನ್ನು ಕತ್ತರಿಸಿದ ನಂತರ ತೊಳೆದರೆ, ಅದರಲ್ಲಿರುವ ಪೋಷಕಾಂಶಗಳೂ ನೀರಿನಲ್ಲಿ ತೊಳೆಯುತ್ತವೆ.

*ಸೊಪ್ಪು- ಅವುಗಳನ್ನು ತೊಳೆದ ನಂತರ, ಪೇಪರ್ ನ್ಯಾಪ್ಕಿನ್ ನಲ್ಲಿ ಸುತ್ತಿ, ಅವುಗಳನ್ನು ಪ್ಲಾಸ್ಟಿಕ್ ಕಂಟೈನರ್ ಅಥವಾ ಸೀಲ್ ಮಾಡಿದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿಡಿ. ಅವುಗಳನ್ನು ಸಂಗ್ರಹಿಸುವ ಮೊದಲು ಬಾಡಿದ ಅಥವಾ ಕೊಳೆತ ಎಲೆಗಳನ್ನು ತೆಗೆಯಿರಿ. ನಮ್ಮಲ್ಲಿ ಹೆಚ್ಚಿನ ಜನ ಒಂದು ಬಾರಿ ಬಳಸಿದ ಪ್ಲಾಸ್ಟಿಕ್ ಕಂಟೈನರ್ ಅನ್ನೇ ಮತ್ತೆ ಮತ್ತೆ ಸೊಪ್ಪು ಸಂಗ್ರಹಿಸಲು ಬಳಸುತ್ತಾರೆ, ಆದರೆ ಪ್ರತೀ ಬಾರಿ ಬಳಸುವ ಮೊದಲು, ಅವುಗಳನ್ನು ತೊಳೆದು, ಒಣಗಿಸಿ, ನಂತರ ಸಂಗ್ರಹಿಸಿ.

*ಟೊಮ್ಯಾಟೋಗಳು- ಟೊಮ್ಯಾಟೋಗಳು ಹೆಚ್ಚು ಹಣ್ಣಾಗಿದ್ದರೆ, ಅವುಗಳನ್ನು ರೆಫ್ರಿಜರೇಟರ್ ನಲ್ಲಿಡಿ. ಇಲ್ಲದಿದ್ದರೆ, ಅವುಗಳನ್ನು ಗಾಳಿಯಾಡುವ ಬ್ಯಾಸ್ಕೆಟ್ ಅಥವಾ ಮೆಶ್ ಬ್ಯಾಗ್ ನಲ್ಲಿಡಿ. ಅವುಗಳ ಮೇಲೆ ನೇರವಾಗಿ ಸೂರ್ಯನ ಬಿಸಿಲು ಬೀಳದಂತೆ ಎಚ್ಚರವಹಿಸಿ.

*ಎಲೆಕೋಸು- ಎಲೆಕೋಸನ್ನು ಇಡಿಯಾಗಿದ್ದರೆ, ರೆಫ್ರಿಜರೇಟರ್ ನಲ್ಲಿ ಹಾಗೆಯೇ ಸಂಗ್ರಹಿಸಿ, ಅದನ್ನು ಕತ್ತರಿಸಿದ್ದರೆ, ಗಾಳಿಯಾಡದ ಬ್ಯಾಗ್ ನಲ್ಲಿ ಸಂಗ್ರಹಿಸಿ. ಅದನ್ನು ಬಳಸುವಾಗ, ಅದರ ಗಾಢ ಬಣ್ಣದ ಭಾಗವನ್ನು ತೆಗೆಯಿರಿ (ಅದು ಆಕ್ಸಿಡೈಸ್ ಆಗಿರುತ್ತದೆ).

*ಬ್ರಕೋಲಿ ಮತ್ತು ಹೂಕೋಸು- ನೀವು ಅವುಗಳನ್ನು ಮನೆಗೆ ತಂದ ಕೂಡಲೇ ಸ್ವಚ್ಛಗೊಳಿಸಬೇಕು, ಏಕೆಂದರೆ ಇದು ಹುಳಗಳು ಮತ್ತು ರೋಗಕಾರಕಗಳಿಂದ ತುಂಬಿರುತ್ತದೆ. ಅವುಗಳನ್ನು ತೊಳೆದ ನಂತರ, ನೀವು ಅದನ್ನು ಇಡಿಯಾಗಿ ಒಣಗಿಸಿ ಅಥವಾ ಚಿಕ್ಕದಾಗಿ ಕತ್ತರಿಸಿ ಒಣಗಿಸಿ. ಚಿಕ್ಕದಾಗಿ ಕತ್ತರಿಸಿದರೆ ಸಂಗ್ರಹಿಸಲು ಸುಲಭ. ಅವುಗಳನ್ನು ಬಟ್ಟೆಯಲ್ಲಿ ಒರೆಸಿ, ಅದರ ಮೇಲೆ ಮತ್ತೊಂದು ಬಟ್ಟೆ ಮುಚ್ಚಿ, ಇದರಿಂದ ಎಲ್ಲಾ ತೇವಾಂಶವೂ ಹೀರಲ್ಪಡುತ್ತದೆ. ಅದನ್ನು ನೇರವಾದ ಸೂರ್ಯನ ಬಿಸಿಲಿನಲ್ಲಿ ಎಂದಿಗೂ ಒಣಗಿಸಬೇಡಿ, ಹಾಗೆ ಮಾಡಿದರೆ ಅದು ಹಾಳಾಗುತ್ತದೆ.

*ಮಾವಿನಹಣ್ಣು- ಮಾವಿನಹಣ್ಣುಗಳನ್ನು ಪಕ್ವವಾಗಿಲ್ಲದಿದ್ದರೆ ಕತ್ತಲೆಯ ಸ್ಥಳದಲ್ಲಿಡಿ. ಅದಾದ ನಂತರ, ಅದನ್ನು ರೆಫ್ರಿಜರೇಟರ್ ನಲ್ಲಿಡಬಹುದು. ಮಾವಿನಹಣ್ಣು ಸಂಪೂರ್ಣವಾಗಿ ಹಣ್ಣಾದ ನಂತರ ಅದನ್ನು ತೊಳೆಯಬೇಕು ಅಥವಾ ನೀರಿನಲ್ಲಿ ಅದ್ದಬೇಕು. ಅವುಗಳನ್ನು ಇತರ ತರಕಾರಿಗಳಿಂದ ದೂರ ಸಂಗ್ರಹಿಸಬೇಕು, ಇಲ್ಲದಿದ್ದರೆ ಆ ತರಕಾರಿಗಳು ಅಗತ್ಯಕ್ಕಿಂತ ಬೇಗ ಹಣ್ಣಾಗುತ್ತವೆ.

*ಸಿಟ್ರಸ್ ಹಣ್ಣುಗಳು- ಸಿಟ್ರಸ್ ಹಣ್ಣುಗಳನ್ನು ರೆಫ್ರಿಜರೇಟರ್ ಅಥವಾ ಹೊರಗೆ ಗಾಳಿಯಾಡುವ ತೆರೆದ ಮೆಶ್ ಬ್ಯಾಗ್ ನಲ್ಲಿ ಸಂಗ್ರಹಿಸಬಹುದು

*ಸೇಬು ಮತ್ತು ಇತರ ಬೆರ್ರಿಗಳು- ಸೇಬು ಮತ್ತು ಇತರ ಬೆರ್ರಿಗಳನ್ನು ಸೇವಿಸುವ ಸಮಯದಲ್ಲಿ ತೊಳೆಯಬೇಕು. ಅವುಗಳನ್ನು ಮೊದಲೇ ನೀರಿನಲ್ಲಿ ತೊಳೆದರೆ, ಹಾಳಾಗುತ್ತವೆ.

ನಾವೀಗ ಎದುರಿಸುತ್ತಿರುವ ಅಸಹಜ ಸನ್ನಿವೇಶಗಳಲ್ಲಿ, ನಾವು ಏನನ್ನು ಸೇವಿಸಬೇಕು ಮತ್ತು ಹೇಗೆ ಸೇವಿಸಬೇಕು ಎನ್ನುವುದರ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. ಆದ್ದರಿಂದ, ಅವುಗಳನ್ನು ಸ್ವಚ್ಛಗೊಳಿಸುವ ಮತ್ತು ಸಂಗ್ರಹಿಸುವ ಸರಿಯಾದ ವಿಧಾನಗಳನ್ನು ಅನುಸರಿಸುವುದು ನಮ್ಮ ಶರೀರಕ್ಕೆ ಪ್ರಯೋಜನಕಾರಿ.

–ಲೇಖಕರು (ಕುನಾಲ್ ಕಪೂರ್)ಅಂತರರಾಷ್ಟ್ರೀಯ ಖ್ಯಾತಿಯ ಶೆಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.