ADVERTISEMENT

ಶಿಶುವಿನಲ್ಲೇ ಹೃದಯ ಸಂಬಂಧಿ ಕಾಯಿಲೆ: ಗರ್ಭಾವಸ್ಥೆಯಲ್ಲೇ ಪತ್ತೆ ಹಚ್ಚುವುದು ಸೂಕ್ತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 13:10 IST
Last Updated 26 ಫೆಬ್ರುವರಿ 2026, 13:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹುಟ್ಟಿನಿಂದಲೇ ಬರುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಜನಿಸಿದ 5ನೇ ಒಂದರಷ್ಟು ಮಕ್ಕಳಲ್ಲಿ ಸರಿಯಾದ ಸಮಯಕ್ಕೆ ಈ ರೋಗ ಪತ್ತೆಯಾಗುತ್ತಿಲ್ಲ ಎಂದು ಅಧ್ಯಯನಗಳು ತಿಳಿಸಿವೆ. ತಪಾಸಣೆಯ ವಿಳಂಬ ಅಥವಾ ವೈದ್ಯಕೀಯ ಅರಿವಿನ ಕೊರತೆಯಿಂದಾಗಿ ಇದು ಸಂಭವಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ಮೊದಲ ರಕ್ಷಣಾ ಕವಚ: ಪ್ರಸವಪೂರ್ವ ತಪಾಸಣೆ

ADVERTISEMENT

ಮಗುವಿನ ಹೃದಯದ ಕಾಳಜಿ ಮಗು ಜನಿಸಿದ ನಂತರ ಆರಂಭವಾಗುವುದಲ್ಲ. ಬದಲಾಗಿ ಗರ್ಭದಲ್ಲಿರುವಾಗಲೇ ಕಾಳಜಿ ಮಾಡಬೇಕಾಗುತ್ತದೆ. ತಾಯಿ ಗರ್ಭದಲ್ಲಿ ಮಗು ಭ್ರೂಣವಾದ 18 ರಿಂದ 20ನೇ ವಾರದ ನಡುವೆ 'ಅನಾಮಲಿ ಸ್ಕ್ಯಾನ್' ಮಾಡುವ ಮೂಲಕ ಮಗುವಿನಲ್ಲಿನ ಶೇ 85ರಷ್ಟು ಹೃದಯ ಸಂಬಂಧಿ ದೋಷಗಳನ್ನು ಗುರುತಿಸಬಹುದು.

ಆರಂಭಿಕ ಹಂತದಲ್ಲಿ ಪೋಷಕರು 'ಫೀಟಲ್ ಎಕೋಕಾರ್ಡಿಯೋಗ್ರಾಮ್' ಎಂಬ ವಿಶೇಷ ಅಲ್ತ್ರಾಸೌಂಡ್ ಪರೀಕ್ಷೆ ಮಾಡಿಸುವ ಮೂಲಕ ಮಗುವಿನ ಹೃದಯದ ರಚನೆ ಮತ್ತು ಕಾರ್ಯವನ್ನು ಪರೀಕ್ಷಿಸಬಹುದಾಗಿದೆ.

ಮುನ್ನೆಚ್ಚರಿಕೆ

  • ಸಂಧಶೋಧ‌ನೆಯ ಪ್ರಕಾರ ಶೇ 4 ರಿಂದ 5ರಷ್ಟು ಮಕ್ಕಳಲ್ಲಿ ಮಾತ್ರ ವಂಶಪಾರಂಪರ್ಯವಾಗಿ ಹೃದಯ ಸಮಸ್ಯೆ ಬರುತ್ತವೆ. ಉಳಿದದ್ದು ಭ್ರೂಣ ಗರ್ಭದಲ್ಲಿ ರೂಪುಗೊಳ್ಳುತ್ತಿರುವಾಗ ಈ ಸಮಸ್ಯೆ ಹೆಚ್ಚಾಗಿಯೇ ಕಂಡುಬರುತ್ತದೆ.

  • ಗರ್ಭಧರಿಸಲು ಬಯಸುವ ಮಹಿಳೆಯರು ಕನಿಷ್ಠ 6 ತಿಂಗಳ ಮೊದಲು ಫೋಲಿಕ್ ಆಸಿಡ್ ಮತ್ತು ಮಲ್ಟಿ ವಿಟಮಿನ್ ಸೇವನೆಯನ್ನು ಪ್ರಾರಂಭಿಸುದು ಉತ್ತಮ.

  • ಇದು ಹೃದಯದ ಬೆಳವಣಿಗೆಯ ಅತ್ಯಂತ ಸೂಕ್ಷ್ಮ ಹಂತಗಳಲ್ಲಿ ವಿಟಮಿನ್ ಎ, ಡಿ ಮತ್ತು ಫೋಲಿಕ್ ಆಸಿಡ್ ಮಟ್ಟವು ಸಮರ್ಪಕವಾಗಿರುವುದನ್ನು ಖಚಿತಪಡಿಸುತ್ತದೆ.

  • ದೀರ್ಘಕಾಲದ ಕಾಯಿಲೆಗಳಿಗೆ ಔಷಧಿ ಸೇವಿಸುತ್ತಿರುವ ಮಹಿಳೆಯರು ಗರ್ಭಧರಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಿ, ಭ್ರೂಣಕ್ಕೆ ಹಾನಿಯಾಗದ ಪರ್ಯಾಯ ಔಷಧಿಗಳನ್ನು ಪಡೆಯಬೇಕು.

ಪೋಷಕರಿಗೆ ಎಚ್ಚರಿಕೆಯ ಸೂಚನೆಗಳು

  • ಮಗು ಜನಿಸಿದ ನಂತರ ಮೊದಲ ಮೂರು ತಿಂಗಳು ಪೋಷಕರು ಮಗುವಿನ ಪ್ರತಿಯೊಂದು ಬದಲಾವಣೆ ಮತ್ತು ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.

  • ಮಗು ಹಾಲು ಕುಡಿಯುವಾಗ ಉಸಿರಾಟದ ಸಮಸ್ಯೆಯಾಗುವುದು. ಹಾಲು ಕುಡಿಯುವಾಗ ಅತಿಯಾಗಿ ಬೆವರುವುದು, ತುಟಿ ಅಥವಾ ಚರ್ಮದ ಮೇಲೆ ನೀಲಿ ಬಣ್ಣ ಕಾಣಿಸಿಕೊಳ್ಳುವುದು (ಸಯಾನೋಸಿಸ್) ಮತ್ತು ಮಗುವಿನ ಸರಿಯಾದ ಬೆಳವಣಿಗೆಯ ಕೊರತೆ ಮುಂತಾದವುಗಳು ಹೃದಯ ಸಂಬಂಧಿ ಸಮಸ್ಯೆಯ ಎಚ್ಚರಿಕೆ ಚಿಹ್ನೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.