ADVERTISEMENT

ಮಕ್ಕಳ ಮೊಬೈಲ್ ವ್ಯಸನ ಬಿಡಿಸಲು ಇಲ್ಲಿವೆ ತಜ್ಞರ ಉಪಯುಕ್ತ ಸಲಹೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 12:41 IST
Last Updated 11 ಡಿಸೆಂಬರ್ 2025, 12:41 IST
   

ಕೋವಿಡ್–19 ಬಳಿಕ ಚಿಕ್ಕ ಮಕ್ಕಳು ಹೆಚ್ಚಾಗಿ ಮೊಬೈಲ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಎಂದು ಅನೇಕ ವರದಿಗಳು ಪ್ರಕಟವಾಗಿವೆ. ಹೀಗಾಗಿ ಫೋನ್ ಬಳಕೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು, ಮೊಬೈಲ್ ವ್ಯಸನಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಬಗ್ಗೆ ವೈದ್ಯರು ನೀಡಿದ ಸಲಹೆಗಳು ಇಲ್ಲಿವೆ.

ಮಕ್ಕಳ ಮೊಬೈಲ್ ವ್ಯಸನಕ್ಕೆ ಕಾರಣ

  • ಮಕ್ಕಳು ಮಿದುಳು ತುಂಬಾ ಚುರುಕು ಇರುವುದರಿಂದ ಮೊಬೈಲ್‌ನಲ್ಲಿನ ಕೆಲವು ಆಕರ್ಷಕ ವಿಷಯಗಳನ್ನು (ಉದಾಹರಣೆಗೆ): ರೀಲ್ಸ್, ಗೇಮ್, ಸೇರಿದಂತೆ ಅನೇಕ ವಿಷಯಗಳನ್ನು ಬೇಗ ಗ್ರಹಿಸಿಕೊಳ್ಳುತ್ತಾರೆ.

    ADVERTISEMENT
  • ಮಕ್ಕಳು 20–30 ನಿಮಿಷ ಫೋನ್ ನೋಡುವುದರಿಂದ ‘ಡೋಪ್‌ಮೈನ್’ (neurotransmitter)  ಎಂಬ ಹಾರ್ಮೋನ್ ಬಿಡುಗಡೆಯಾಗಿ ಮಕ್ಕಳ ಮಿದುಳಿನ ಮೇಲೆ ಶೇ 20ರಷ್ಟು ಹೆಚ್ಚಿನ ಪರಿಣಾಮ ಬೀರುತ್ತದೆ. 

  • ಮಕ್ಕಳು ಊಟ ಮಾಡುತ್ತಿಲ್ಲ, ಹಠ ಮಾಡುತ್ತಿರುತ್ತಾರೆ ಎಂದು ಮೊಬೈಲ್‌ನಲ್ಲಿ ರೀಲ್ಸ್ ಅಥವಾ ಗೇಮ್ ಹಾಕಿಕೊಟ್ಟು ಅಭ್ಯಾಸ ಮಾಡಿಸಿದರೆ ಕ್ರಮೇಣ ಮಕ್ಕಳು ಅದಕ್ಕೆ ಒಗ್ಗಿಕೊಳ್ಳುತ್ತಾರೆ. ಅಲ್ಲದೆ, ಮಕ್ಕಳು ತಂದೆ–ತಾಯಿ ನಡವಳಿಕೆಗಳನ್ನು ಹೆಚ್ಚು ಅನುಸರಿಸುತ್ತಾರೆ. ಹೀಗಾಗಿ ಪೋಷಕರು ಕೂಡ ಮಕ್ಕಳ ಎದುರು ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.

ಪೋನ್ ವ್ಯಸನದಿಂದಾಗುವ ಪರಿಣಾಮಗಳು

  • ಮಕ್ಕಳು ಪೋನ್ ವ್ಯಸನಕ್ಕೆ ಒಳಗಾಗಿದ್ದರೆ ಅವರ ಸಕ್ರಿಯತೆ ಕಡಿಮೆಯಾಗುತ್ತದೆ.

  • ನೇರವಾಗಿ ಮಿದುಳಿನ ಮೇಲೆ ಪ್ರಭಾವ ಬೀರಿ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

  • ಮಕ್ಕಳ ದೃಷ್ಟಿ ಸಮಸ್ಯೆ ಹಾಗೂ ತಲೆನೋವಿಗೆ ಕಾರಣವಾಗಬಹುದು.

  • ಮಕ್ಕಳು ಓದಿನಲ್ಲಿ ಹಿನ್ನಡೆಯಾಗಬಹುದು

  • ಆತಂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಪರಿಹಾರ ಕ್ರಮಗಳು

ಪೋಷಕರು ಮಕ್ಕಳ ಚಟುವಟಿಕೆಯನ್ನು ಗಮನಿಸಬೇಕು.

ಪೋಷಕರು ಮಕ್ಕಳ ಜತೆ ಹೆಚ್ಚು ಸಮಯ ಕಳೆಯಬೇಕು

ಫೋನ್ ಅನ್ನು ಹೆಚ್ಚು ಅವಲಂಬಿಸಿರುವ ಮಕ್ಕಳ ಬಳಿ ದಿಢೀರನೆ ಫೋನ್ ಬಳಸಬಾರದು ಎಂದು ಒತ್ತಡ ಹೇರದೆ ನಿಧಾನವಾಗಿ ಅವರನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು.

ಮಕ್ಕಳು ಫೋನ್ ನೋಡಲು ಹಠ ಮಾಡುತ್ತಿದ್ದರೆ ಅವರಿಗೆ ಸಮಯ ನಿಗದಿ ಮಾಡಬೇಕು. ಅಂದರೆ 10ರಿಂದ 15 ನಿಮಿಷ ಮಾತ್ರ ಮೊಬೈಲ್ ಬಳಸಲು ಬಿಡಬೇಕು.

ಮಕ್ಕಳಿಗೆ ಫೋನ್ ನೆನಪಾಗದಂತೆ ಅವರ ಜತೆ ಆಟ, ಸಣ್ಣಪುಟ್ಟ ಚಟುವಟಿಕೆಯಲ್ಲಿ ತಂದೆ–ತಾಯಿ ಭಾಗಿಯಾಗಬೇಕು.

ಸಂಜೆ ವೇಳೆ ಮಕ್ಕಳನ್ನು ಹತ್ತಿರದ ಪಾರ್ಕ್ ಅಥವಾ ದೈಹಿಕ ಚಟುವಟಿಕೆ ಮಾಡಿಸಲು ಪೋಷಕರು ಆಸಕ್ತಿ ತೋರಬೇಕು.

ಫೋನ್ ಬಳಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಉದಾಹರಣೆ ಸಹಿತ ತಿಳಿಸಬೇಕು.

ಆಸಕ್ತಿದಾಯಕ ವಿಷಯಗಳನ್ನು ಕುರಿತು ಮಕ್ಕಳಿಗೆ ಕಥೆ ಹೇಳುತ್ತಿರಬೇಕು.  

ಮಕ್ಕಳು ಮಲಗುವ ಕೋಣೆಯಲ್ಲಿ ಪೋನ್‌‌ಗಳನ್ನು ಇಡಬಾರದು. ಒಂದು ವೇಳೆ ಮೊಬೈಲ್ ಹತ್ತಿರ ಇಟ್ಟರೂ ವೈಫೈ, ನೆಟ್‌ವರ್ಕ್,ಬ್ಲೂಟೂತ್‌ ಆಫ್ ಮಾಡಿ ಇಡಬೇಕು.

ಮಕ್ಕಳಿಗೆ ಸಂಬಂಧಿಸಿದ ಕಥೆ ಪುಸ್ತಕಗಳ ಮಹತ್ವ ತಿಳಿಸಿಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.