
ಪಿಸಿಒಡಿ (PCOD) ಎಂದರೆ ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್. ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನವಾಗಿ ಈ ಸಮಸ್ಯೆ ಉಂಟಾಗುತ್ತದೆ. 18 ವರ್ಷ ಮೇಲ್ಪಟ್ಟ ಯುವತಿಯರಲ್ಲಿ ಪಿಸಿಒಡಿ ಕಂಡುಬರುತ್ತದೆ. ಮಹಿಳೆಯರ ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಪಿಸಿಒಡಿ ಲಕ್ಷಣಗಳು
ಸರಿಯಾದ ಸಮಯಕ್ಕೆ ಮುಟ್ಟಾಗದೇ ಇರುವುದು. (Irregular Periods)
ಮುಖ, ಬೆನ್ನು, ಇತರ ಭಾಗಗಗಳಲ್ಲಿ ಅತಿಯಾಗಿ ಕೂದಲು ಬೆಳವಣಿಗೆ
ತೂಕ ಹೆಚ್ಚುವುದು
ಗರ್ಭಧಾರಣೆಗೆ ಕಷ್ಟವಾಗುವುದು
ಬೊಜ್ಜು ಹೆಚ್ಚಳಕ್ಕೆ ಕಾರಣ
ಮನಸ್ಥಿತಿ ಬದಲಾವಣೆ (ಮೂಡ್ ಸ್ವಿಂಗ್ಸ್)
ಕಾರಣಗಳು
ಒತ್ತಡ ಮತ್ತು ಮಾನಸಿಕ ಖಿನ್ನತೆ
ಕಳಪೆ ಗುಣಮಟ್ಟದ ಆಹಾರ ಸೇವನೆ
ಕೆಲವು ಔಷಧಿಗಳ ಸೇವನೆಯ ಅಡ್ಡ ಪರಿಣಾಮ
ಪಿಸಿಒಡಿ ಹೋಗಲಾಡಿಸಲು ಸರಳ ಉಪಾಯ
ಸರಿಯಾದ ಸಮಯಕ್ಕೆ ಊಟ ಸೇವನೆ
ಪ್ರತಿನಿತ್ಯ ಯೋಗ, ವ್ಯಾಯಮ ಮಾಡಬೇಕು
ಸರಿಯಾದ ಸಮಯಕ್ಕೆ ನಿದ್ದೆ ಮಾಡವುದು
ಆಹಾರ ಕ್ರಮ
ಹಾಗಲಕಾಯಿ ಜ್ಯೂಸ್, ಕಹಿಬೇವು ಜ್ಯೂಸ್, ನೆಲ್ಲಿಕಾಯಿ ಜ್ಯೂಸ್ , ತರಕಾರಿ,ಹಣ್ಣುಗಳ ನಿಯಮಿತ ಸೇವನೆ ಮಾಡುವುದರಿಂದ ಪಿಸಿಒಡಿ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
ಲೇಖಕರು: ಬೆಂಗಳೂರಿನ ಆಯುರ್ವೇದ ತಜ್ಞರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.