ADVERTISEMENT

ಮನೋವಿಜ್ಞಾನ: ಸುಳ್ಳು ಹೇಳುವುದರಿಂದ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:26 IST
Last Updated 17 ನವೆಂಬರ್ 2025, 6:26 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಸುಳ್ಳು ಹೇಳುವುದು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದರ ದಾರಿಯಾಗಿದೆ. ಕೆಲವರು ಸಂದರ್ಭಕ್ಕೆ ಅನುಸಾರವಾಗಿ ಹೇಳುವ ಒಂದು ಸುಳ್ಳು ನಿಧಾನವಾಗಿ ಜೀವನ ಪೂರ್ತಿ ಅಭ್ಯಾಸವಾಗಿ ಬಿಡುತ್ತದೆ.

ಸುಳ್ಳು ನಿಮ್ಮ ನಂಬಿಕೆ, ಸಂಬಂಧಗಳು ಮತ್ತು ಸ್ವಭಾವವನ್ನೇ ಮೌನವಾಗಿ ಕುಂದಿಸುವ ಚಟ ಎಂದು ಮನೋವಿಜ್ಞಾನ ಹೇಳುತ್ತದೆ. ಹಾಗಾದರೆ ಸುಳ್ಳು ಅಭ್ಯಾಸವಾಗಲು ಕಾರಣವೇನು? ಈ ಕುರಿತು ಮನೋವಿಜ್ಞಾನ ಏನು ಹೇಳುತ್ತದೆ? ಎಂಬ ಮಾಹಿತಿ ಇಲ್ಲಿದೆ. 

ADVERTISEMENT

ಮನೋವಿಜ್ಞಾನದ ಪ್ರಕಾರ ಸುಳ್ಳು ಅಭ್ಯಾಸವಾಗಲು ಕಾರಣ: 

  • ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಆತ್ಮವಿಶ್ವಾಸ ಕಡಿಮೆ.

  • ನಿಜ ಹೇಳಿದರೆ ಸಮಸ್ಯೆಗಳು ಎದುರಾಗಬಹುದು ಎಂಬ ಭಯ.

  • ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳುವ ಮನೋಭಾವ ಸುಳ್ಳಿಗೆ ದಾರಿ ಮಾಡಿಕೊಡುತ್ತದೆ.

  • ಸುಳ್ಳು ಹೇಳುವುದರಿಂದ ಆ ಕ್ಷಣದಲ್ಲಿ ಸಮಸ್ಯೆ ತಪ್ಪುತ್ತದೆ ಎಂಬ ಭಾವನೆ. 

  • ಮಿದುಳು ಇದನ್ನೇ ಸುರಕ್ಷಿತ ಎಂದು ಕಲಿತು, ಪದೇ ಪದೇ ಬಳಕೆ ಮಾಡುವುದಕ್ಕೆ ಆರಂಭಿಸುತ್ತದೆ. 

  • ಸ್ವತಃ ತನ್ನ ಮೇಲೆ ತನಗೆ ನಂಬಿಕೆಯ ಕೊರತೆ ಇರುವುದು.

ಸುಳ್ಳು ಅಭ್ಯಾಸವಾದರೆ ಏನಾಗುತ್ತದೆ?

  • ಇತರರ ನಂಬಿಕೆ ಗಳಿಸುವುದು ಕಷ್ಟ.

  • ಮನಸ್ಸಿನೊಳಗೆ ತಪ್ಪು ಮಾಡಿದ ಭಾವನೆ ಕಾಡುತ್ತದೆ. 

  • ಒಂದು ಸುಳ್ಳನ್ನು ಮತ್ತೊಂದು ಸುಳ್ಳಿನಿಂದ ಮುಚ್ಚುವ ಪರಿಸ್ಥಿತಿ ಬರಬಹುದು.

  • ಸಂಬಂಧಗಳ ನಡುವೆ ಬಿರುಕು ಉಂಟಾಗಬಹುದು.

  • ಆತ್ಮವಿಶ್ವಾಸ ಕುಸಿತವಾಗಬಹುದು.

  • ಆತಂಕ, ಅಪರಾಧ ಭಾವನೆ ಹಾಗೂ ಒತ್ತಡದ ಹೆಚ್ಚಳ

ಸುಳ್ಳು ಹೇಳುವ ಅಭ್ಯಾಸ ದೂರ ಮಾಡಲು ಮನೋವಿಜ್ಞಾನದಲ್ಲಿರುವ ಸಲಹೆಗಳು:

  • ಆಲೋಚನಾ ಕ್ರಮದಲ್ಲಿ ಬದಲಾವಣೆ: ಸುಳ್ಳು ನನ್ನನ್ನು ಎಂದಿಗೂ ರಕ್ಷಿಸುವುದಿಲ್ಲ. ಇದು ದೀರ್ಘಕಾಲದಲ್ಲಿ ಹಾನಿ ಉಂಟು ಮಾಡುತ್ತದೆ ಎಂಬುದನ್ನು ಮಿದುಳಿಗೆ ನಿಧಾನವಾಗಿ ಕಲಿಸಿ.

  • ಕ್ಷಣ ಜಾಗೃತಿ: ಉತ್ತರ ಹೇಳುವ ಮೊದಲು ಯೋಚಿಸು. ತಾಳ್ಮೆಯಿಂದ ಸತ್ಯವನ್ನು ಹೇಳುವುದನ್ನು ಅಭ್ಯಾಸ ಮಾಡಿಕೋ.

  • ಸುರಕ್ಷಿತ ವಾಕ್ಯಗಳು: ಸುಳ್ಳು ಹೇಳುವ ಬದಲು ಹೀಗೆ ಹೇಳಿ. ‘ನಿಜ ಹೇಳೋಕೆ ಸ್ವಲ್ಪ ಕಷ್ಟ, ಆದರೆ ಹೇಳುತ್ತೇನೆ’. ಹೀಗೆ ಶುರು ಮಾಡುವುದರಿಂದ ಮನವೊಲಿಕೆ ಸಾಧ್ಯ.

  • ‌ಸ್ವಯಂ ನಿಗಾವಹಿಸುವಿಕೆ: ದಿನದಲ್ಲಿ ಹೇಳಿದ ಎಲ್ಲ ಸುಳ್ಳುಗಳನ್ನು ಬರೆದಿಡಿ. ಯಾವ ಸಂದರ್ಭಗಳಲ್ಲಿ ಹೆಚ್ಚು ಸುಳ್ಳು ಹೇಳುವೀರಿ ಎಂಬುದನ್ನು ಗಮನಿಸಿ.

  • ಸಣ್ಣ ಸತ್ಯಗಳ ಅಭ್ಯಾಸ: ದಿನಕ್ಕೆ ಒಂದು ಸತ್ಯವನ್ನು ಧೈರ್ಯದಿಂದ ಹೇಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮಿದುಳಿಗೆ ನಿಧಾನವಾಗಿ ಅಭ್ಯಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.