ADVERTISEMENT

55ರ ಹರೆಯದಲ್ಲೂ ಸೈಫ್ ಸಖತ್ ಫಿಟ್: ಫಿಟ್ನೆಸ್ ರಹಸ್ಯ ತಿಳಿಸಿದ ಯೋಗ ತರಬೇತುದಾರ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌
Published 7 ಅಕ್ಟೋಬರ್ 2025, 10:56 IST
Last Updated 7 ಅಕ್ಟೋಬರ್ 2025, 10:56 IST

ಚಿತ್ರ ಕೃಪೆ: rupal_sidh

ಚಿತ್ರ ಕೃಪೆ: rupal_sidh

ಪ್ರಸ್ತುತ ದಿನಗಳಲ್ಲಿ ಜಟಿಲವಾದ ಜೀವನಶೈಲಿ ನಿಯಂತ್ರಿಸಲು ಅನೇಕರು ಯೋಗದ ಮೊರೆ ಹೋಗುವುದನ್ನು ಕಾಣಬಹುದು. ಇದಕ್ಕೆ ಸೆಲಿಬ್ರೆಟಿಗಳು ಹೊರತಾಗಿಲ್ಲ. ಸಮತೋಲನ ಆಹಾರ ಮತ್ತು ಉತ್ತಮ ನಿದ್ದೆಯ ಜೊತೆಗೆ ಯೋಗದ ಅಭ್ಯಾಸ ಮಾಡುವುದು ಡಿಜಿಟಲ್ ಯುಗದಲ್ಲಿನ ಗೊಂದಲ‌ಮಯ ಜೀವನ ಶೈಲಿಗೆ ಉತ್ತಮ ಪರಿಹಾರವಾಗಿದೆ. ಅದರಂತೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡ ತಮ್ಮ ಯೋಗಾಭ್ಯಾಸದಿಂದಲೇ ಆರೋಗ್ಯವಂತ ದೇಹ ಹೊಂದಿದ್ದಾರೆ ಎಂದು ಅವರ ಯೋಗ ತರಬೇತುದಾರರು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಸೈಫ್ ಅಲಿ ಖಾನ್ ಅವರ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದರ ಕುರಿತು ಅವರ ತರಬೇತುದಾರರಾಗಿರುವ ರೂಪಲ್ ವಿವರಿಸಿದ್ದಾರೆ. ಸೈಫ್ ಅಲಿ ಖಾನ್ ಕೈಗಳ ಮೇಲೆ ನಿಲ್ಲುವುದು, ಆಳವಾಗಿ ಹಿಂದಕ್ಕೆ ಬಾಗುವುದು ಮತ್ತು ಮುಂದಕ್ಕೆ ಬಾಗುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಅವರು ಪ್ರದರ್ಶಿಸುವ ಪ್ರತಿಯೊಂದು ಭಂಗಿಯು ಅವರ ಫಿಟ್‌ನೆಸ್‌ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಲ್ಲಾ ಆಸನಗಳು ಒಟ್ಟಾಗಿ ಅವರಿಗೆ ಬಲವಾದ, ಹೊಂದಿಕೊಳ್ಳುವ ಮತ್ತು ಸಮತೋಲಿತ ದೇಹದ ರಚನೆಗೆ ಸಹಾಯಕವಾಗಿವೆ ಎಂದು ತಿಳಿಸಿದ್ದಾರೆ.

55ರ ಹರೆಯದಲ್ಲೂ ಸೈಫ್ ಅಲಿ ಖಾನ್ ದೇಹದ ಸದೃಢತೆ ಹೊಂದಿರುವ ಕುರಿತು ಹೇಳಿರುವ ರೂಪಲ್, 'ಸೈಫ್ ಅಲಿ ಖಾನ್ ಅವರು ಶಕ್ತಿ ಮತ್ತು ಚುರುಕುತನವನ್ನು ತಮ್ಮ ಯೋಗಾಭ್ಯಾಸದಿಂದಲೇ ಹೆಚ್ಚಿಸಿಕೊಂಡಿದ್ದಾರೆ. ಸೈಫ್ ಅವರು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಕಾರಣವಾಗಿರುವ ಯೋಗ ಹಾಗೂ ವ್ಯಾಯಾಮದ ವಿಶಿಷ್ಟ ಭಂಗಿಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.