ADVERTISEMENT

ವಿಟಮಿನ್‌ ಸಿ ಹೇರಳವಾಗಿರುವ ಹಣ್ಣುಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 11:11 IST
Last Updated 9 ಫೆಬ್ರುವರಿ 2026, 11:11 IST
<div class="paragraphs"><p>ದೇಹವನ್ನು ಸದೃಢವಾಗಿಡಲು ಪೋಷಕಾಂಶಗಳು ಅತಿ ಮುಖ್ಯ. ಅದರಲ್ಲಿಯೂ ವಿಟಮಿನ್‌ಗಳ ಪಾತ್ರ ದೊಡ್ಡದು. ವಿಟಮಿನ್‌ ಸಿ ಸೇವನೆಯಿಂದ ದೇಹಕ್ಕೆ ಹತ್ತಾರು ಲಾಭಗಳಿವೆ. ವಿಟಮಿನ್‌ ಸಿ ಹಣ್ಣು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾದರೆ ‍ವಿಟಮಿನ್‌ ಸಿ ಸಮೃದ್ದವಾಗಿರುವ ಹಣ್ಣುಗಳು ಯಾವುವು, ಅವುಗಳ ಸೇವನೆಯಿಂದಾಗುವ ಉಪಯೋಗಗಳೇನು ಎಂಬ ಮಾಹಿತಿ ಇಲ್ಲಿದೆ.&nbsp;</p></div>

ದೇಹವನ್ನು ಸದೃಢವಾಗಿಡಲು ಪೋಷಕಾಂಶಗಳು ಅತಿ ಮುಖ್ಯ. ಅದರಲ್ಲಿಯೂ ವಿಟಮಿನ್‌ಗಳ ಪಾತ್ರ ದೊಡ್ಡದು. ವಿಟಮಿನ್‌ ಸಿ ಸೇವನೆಯಿಂದ ದೇಹಕ್ಕೆ ಹತ್ತಾರು ಲಾಭಗಳಿವೆ. ವಿಟಮಿನ್‌ ಸಿ ಹಣ್ಣು ಮತ್ತು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾದರೆ ‍ವಿಟಮಿನ್‌ ಸಿ ಸಮೃದ್ದವಾಗಿರುವ ಹಣ್ಣುಗಳು ಯಾವುವು, ಅವುಗಳ ಸೇವನೆಯಿಂದಾಗುವ ಉಪಯೋಗಗಳೇನು ಎಂಬ ಮಾಹಿತಿ ಇಲ್ಲಿದೆ. 

   

ಚಿತ್ರ ಕೃಪೆ: ಗೆಟ್ಟಿ

ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್‌ ಸಿ ಸಮೃದ್ದವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಪ್ರತಿ ದಿನ ಒಂದು  ಕಿತ್ತಳೆ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುವುದರ ಜೊತೆಗೆ ಶೀತದಿಂದ ದೇಹವನ್ನು ರಕ್ಷಿಸುತ್ತದೆ. 

ADVERTISEMENT

ಕಿವಿ ಹಣ್ಣು

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕಿವಿ ಹಣ್ಣು ಸಮೃದ್ದವಾಗಿದೆ. ಈ ಹಣ್ಣಿನ ನಿಯಮಿತ ಸೇವನೆ ಹೊಸ ಜೀವಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಅಲ್ಲದೇ ಪೊಟ್ಯಾಸಿಯಮ್ ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.

ಸ್ಟ್ರಾಬೆರಿ

ಸ್ಟ್ರಾಬೆರಿ ತಿನ್ನಲು ಬಹಳ ರುಚಿಕರ ಹಾಗೂ ಪೋಷಕಾಂಶ ಭರಿತ ಹಣ್ಣಾಗಿದೆ. ಇಸು ವಿಟಮಿನ್ ಸಿ ಮತ್ತು ಪಾಲಿಫಿನಾಲ್‌ಗಳಿಂದ ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ಸ್ಟ್ರಾಬೆರಿಗಳನ್ನು ಸೇರಿಸಿಕೊಳ್ಳುವುದರಿಂದ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.

ದೊಣ್ಣೆ ಮೆಣಸಿನಕಾಯಿ

ಇದರಲ್ಲಿ ಕೆಂಪು ಮತ್ತು ಹಳದಿ ಪ್ರಭೇದಗಳಿವೆ. ಈ ಎರಡೂ ವಿಧಗಳು ವಿಟಮಿನ್ ಸಿಯಿಂದ ಕೂಡಿದೆ. ಅವು ರೋಗನಿರೋಧಕ ಶಕ್ತಿ, ಚರ್ಮದ ಆರೋಗ್ಯ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರೊಕೊಲಿ

ಬ್ರೊಕೊಲಿ ಪ್ರಮುಖವಾಗಿ ವಿಟಮಿನ್ ಸಿ, ಕೆ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.